ಶಬರಿಮಲೆ : ಕನಕಪುರ ಮೂಲದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಬರಿ ಮಲೆಗೆ ತೆರಳಿದ್ದ ವ್ಯಕ್ತಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕದ ರಾಮನಗರ ಮೂಲದ ನಿವಾಸಿಯಾಗಿದ್ದ ಕುಮಾರಸ್ವಾಮಿ ಮೃತ ದುರ್ದೈವಿ. ಕುಮಾರಸ್ವಾಮಿ ಅವರಿಗೆ (40) ವರ್ಷ ವಯಸ್ಸಾಗಿತ್ತು. ಆಯ್ಯಪ್ಪ ಭಕ್ತರಾದ ಅವರು ಕಳೆದ ದಿನ ಸಂಜೆ ಸನ್ನಿಧಾನದಲ್ಲಿ ಸೇತುವೆಯಿಂದ ಮಾಲಿಕಪ್ಪುರಂಗೆ ಜಿಗಿದ್ದಾರೆ. ಬಿದ್ದ ರಭಸಕ್ಕೆ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ತಕ್ಷಣ ಅವರಿಗೆ ಸನ್ನಿಧಾನದಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿಲಾಯಿತು.
ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಬಿದ್ದ ರಭಸಕ್ಕೆ ತೀವ್ರ ಒಳಪೆಟ್ಟು ಆಗಿದ್ದರಿಂದ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಈ ಯಾತ್ರಾರ್ಥಿ ಮಾನಸಿಕ ಅಸ್ವಸ್ಥನಾಗಿರಬಹುದು ಎಂಬ ಅನುಮಾನ ಮೂಡಿದೆ. ತಲೆ ಹಾಗೂ ಬೆನ್ನಿಗೆ ಪೆಟ್ಟು ಬಿದ್ದಿದ್ದರಿಂದ ಪರಸ್ಪರ ವಿರುದ್ಧವಾಗಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಎರಡು ದಿನಗಳಿಂದ ಕುಮಾರ್ ಸನ್ನಿಧಾನಂನಲ್ಲಿದ್ದರು ಎಂದು ಪೊಲೀಸ್ ಮಾಹಿತಿ ಹಂಚಿಕೊಂಡಿದ್ದಾರೆ.