ಕೊಪ್ಪಳ : ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರಿ ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಶತ್ರು ರಾಷ್ಟ್ರ ಪಾಕಿಸ್ತಾನ ಸೌಂಡ್ ಇಲ್ಲದಂತೆ ಮೋದಿ ಮಾಡಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕೊಪ್ಪಳದ ಗಂಗಾವತಿ ನಗರದ ಐಎಂಎ ಭವನದಲ್ಲಿ ನಮೋ ಬ್ರೀಗೆಡ್ ನಿಂದ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮ ದಲ್ಲಿ ಮಾತನಾಡಿದ ಸೂಲೆಬೆಲೆ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪ್ರತಿನಿಧಿಗೆ ಗೆಲುವಾಗುವಂತೆ ಮಾಡಿರುವ ಮೋದಿ ಆಡಳಿತದಿಂದ ಜಗತ್ತಿನ ಎಲ್ಲ ದೇಶ ಇಂದು ಭಾರತದ ಸ್ನೇಹ ಬಯಸುತ್ತಿವೆ. ಹೀಗಾಗಿ ಮೂರನೇ ಅವಧಿಗೂ ಪ್ರಧಾನಿಯಾಗಿ ಮೋದಿ ಮುಂದುವರೆಯಬೇಕು.
ಮೋದಿಗಾಗಿ ನಿಮ್ಮ ಕ್ಷೇತ್ರದಲ್ಲಿ ಕಮಲದ ಗುರುತಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು. ಮನಮೋಹನ್ಸಿಂಗ್ ಆಡಳಿತದಲ್ಲಿ ಮುಂಬೈನಲ್ಲಿ ಪಾಕಿಸ್ತಾನ ಉಗ್ರರ ಬಾಂಬ್ ದಾಳಿಯಿಂದ 250 ಜನ ಮೃತಪಟ್ಟಿದ್ದರು. ಆದರೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸದ ಅಂದಿನ ಕಾಂಗ್ರೆಸ್ ಸರ್ಕಾರ ಹಿಂದೂ ಉಗ್ರರ ಸಂಚು ಎಂದು ಬಿಂಬಿಸಲು ಮುಂದಾಗಿತ್ತು. ಪೊಲೀಸರ ದೈರ್ಯದಿಂದ ಬಾಂಬ್ ಕಸಬ್ ಸಿಕ್ಕಿ ಬಿದ್ದ.
ಇಂತಹ ಪರಿಸ್ಥಿತಿಯಿಂದ ಭಾರತವನ್ನು ಮುಕ್ತಗೊಳಿಸಲು ಅಂದು ನಾವು ಮೋದಿ ಅಧಿಕಾರಕ್ಕೆ ಬರಬೇಕೆಂದು ಕೆಲಸ ಮಾಡಿದ್ದೇವು. ಮೋದಿ ಪ್ರಧಾನಿಯಾದ ನಂತರ ಈ ದೇಶದ ಚಿತ್ರಣವೇ ಬದಲಾಯಿತು. ಈ ಹಿಂದೆ 40 ಜನ ಸೈನಿಕರನ್ನು ಕೊಂದ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು 250 ಉಗ್ರರನ್ನು ಅವರ ದೇಶಕ್ಕೆ ನುಗ್ಗಿ ಹೊಡೆದು ಬಂದಿರುವುದು, ಮೋದಿ ಅವರ ಆಡಳಿತದ ಧೈರ್ಯ ಮೆಚ್ಚುವಂತದು ಎಂದು ಹೇಳಿದರು.