ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪೆಟಬಣ ಬಸಾಪೂರ ಓಣಿ, ಬಸ್ತಿಕೇರಿ, ಸೊಪ್ಪಿನಕೇರಿ, ಹಳ್ಳದಕೇರಿ ಸೇರಿದಂತೆ ಹಲವಾರು ಓಣಿಯಲ್ಲಿ ಹುಚ್ಚು ನಾಯಿಯೊಂದು ಮಗು ಸೇರಿದಂತೆ 25 ಮಂದಿಯನ್ನು ಕಚ್ಚಿ ಗಾಯಗೊಳಿಸಿದೆ. ಇರಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ.
ಓಣಿಗಳಲ್ಲಿ ಮಕ್ಕಳು ಆಟ ಆಡುತ್ತಿರುವಾಗ ಏಕಾಏಕಿ ಹುಚ್ಚುನಾಯಿ ದಾಳಿ ಮಾಡಿ ಮೂರು ವರ್ಷ ಮಗುವಿನ ಮೇಲೆ ಎಲ್ಲೆಂದರಲ್ಲಿ ಕಚ್ಚಿದರಿಂದ ಮಗುವಿಗೆ ಗಾಯವಾದಗ ರಾತ್ರೋರಾತ್ರಿ ಜಿಲ್ಲಾ ಆಸ್ಪತ್ರೆ ಒಬ್ಬರನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನೊಬ್ಬರಿಗೆ ಹುಬ್ಬಳಿಯ ಕಿಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
ನಂತರದಲ್ಲೂ ನಾಯಿಯು ದಾರಿ ಮಧ್ಯೆ ಸಿಕ್ಕ ಸಿಕ್ಕವರ ಮೇಲೆ ಎರಗಿ, ನಾಯಿಯು ಬೆನ್ನು, ತೊಡೆ, ಕೈ, ಕಾಲು, ಮುಖದ ಭಾಗಕ್ಕೆ ಕಚ್ಚಿದೆ. ನಂತರ ಬಡಾವಣೆಯ 5ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಹಾಗೂ ದನ ಕರುವಿಗೆ ಕಚ್ಚಿದೆ. ಹುಚ್ಚು ನಾಯಿಯನ್ನೂ ಹಿಡಿಯುವಂತೆ ಪುರಸಭೆಗೆ ಜನರು ಮನವಿ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿರುವ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.