Tuesday, March 3, 2026
27.3 C
Bengaluru
Google search engine
LIVE
ಮನೆಧರ್ಮತಿರುಪತಿಗೆ ಇನ್ನು 3 ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗಬಹುದು - ಯಾಕೆ ಗೊತ್ತಾ?

ತಿರುಪತಿಗೆ ಇನ್ನು 3 ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗಬಹುದು – ಯಾಕೆ ಗೊತ್ತಾ?

ನೀವು ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಹೋಗ್ತಿದ್ದೀರಾ? ವೀಕೆಂಡ್ ಆದ್ದರಿಂದ ರಶ್ ಇರಬಹುದು ಅನ್ಕೋತೀರಾ?

ಟಿಕೆಟ್ ಇಲ್ಲದೆಯೂ ತಿರುಮಲದಲ್ಲಿ ಶೀಘ್ರ ವೆಂಕಟೇಶ್ವರನ ದರ್ಶನ ಪಡೆಯಬಹದು. ಹೇಗೆ ಅಂತಾ ಹೇಳ್ತೀವಿ ನೋಡಿ.

ಈಗ‌ ಬೇಸಿಗೆ ಕಾಲ ಆಗಿದ್ರೂ ಭಕ್ತರು ಬಿರು ಬಿಸಿಲಿನಲ್ಲೇ ಬೆಟ್ಟವನ್ನೇರಿ ಬರ್ತಿದ್ದಾರೆ. ವಾರಾಂತ್ಯ ಆಗಿರೋದ್ರಿಂದ ಭಕ್ತರು ಕೂಡ ಸಾಕಷ್ಟು ಬರ್ತಿದ್ದಾರೆ. ಹೀಗೆ ಬೆಟ್ಟ ಹತ್ತಿ ಬಂದ್ರೂ, ಟಿಕೆಟ್ ಇಲ್ಲದೇ ಬಂದ್ರೂ ಮತ್ತೆ ಕ್ಯೂನಲ್ಲಿ ನಿಲ್ಲಲೇಬೇಕು. ಆದರೆ ವಿವಿಐಪಿ ಭಕ್ತರು ಮಾತ್ರ ಶೀಘ್ರ ದರ್ಶನ ಮಾಡುತ್ತಿದ್ರು. ವಿಐಪಿಗಳಿಗೆಂದಲೇ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಿನ ಸ್ಲಾಟ್ ಗಳಿದ್ದವು. ವಿವಿಐಪಿಗಳ ದರ್ಶನ ಸಮಯದಿಂದ ಸಾಮಾನ್ಯ ಭಕ್ತರು ಕಿಲೋಮೀಟರ್ ಗಟ್ಟಲೆ ಬಿಸಿಲಿನಲ್ಲಿ, ಶೆಡ್‌ನಲ್ಲಿ ಕ್ಯೂ ನಿಲ್ಲುವಂತಾಗುತ್ತಿತ್ತು. ಬಿಸಿಲ ದಗೆಯಲ್ಲೇ ಶೆಡ್‌ನಲ್ಲಿ ಹಲವು ಗಂಟೆಗಳ ಕಾಲ ಬಂಧಿ ಆಗಬೇಕಿತ್ತು. ಆದರೆ ಇಂತಾ ಸಾಮಾನ್ಯ ಭಕ್ತರಿಗೆ ನೆರವಾಗಲು ಟಿಟಿಡಿ ಮುಂದಾಗಿದೆ.

ಇನ್ನು 3 ತಿಂಗಳ ಕಾಲ ಬಿಸಿಲು ಹೆಚ್ಚು ಇರೋದ್ರಿಂದ ಸಾಮಾನ್ಯ ಭಕ್ತರಿಗೆ ದೇವರ‌ದರ್ಶನ ಸ್ಲಾಟ್ ಹೆಚ್ಚಿಸಲು ಟಿಟಿಡಿ ಮುಂದಾಗಿದೆ. ವಿಐಪಿ, ವಿವಿಐಪಿ ಭಕ್ತರ ಸ್ಲಾಟ್ ಕಡಿಮೆ ಮಾಡಿ ಸಾಮಾನ್ಯ ಭಕ್ತರಿಗೆ ಹೆಚ್ಚು ಅವಕಾಶ ನೀಡಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರೂ ಶೀಘ್ರದಲ್ಲೇ ಅವರಿಗೆ ಸ್ವಾಮಿ‌ ವೆಂಕಟೇಶ್ವರನ ದರ್ಶನ ಸಿಗಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments