Thursday, November 20, 2025
21.7 C
Bengaluru
Google search engine
LIVE
ಮನೆ#Exclusive NewsTop Newsದುಷ್ಕೃತ್ಯಕ್ಕೆ ಮಹಾಸಂಚು; ಸ್ಪೋಟಕ ಶಸ್ತ್ರಾಸ್ತ್ರ ಸಿಕ್ಕಿದ್ದೆಲ್ಲಿ..?

ದುಷ್ಕೃತ್ಯಕ್ಕೆ ಮಹಾಸಂಚು; ಸ್ಪೋಟಕ ಶಸ್ತ್ರಾಸ್ತ್ರ ಸಿಕ್ಕಿದ್ದೆಲ್ಲಿ..?

ಛತ್ತೀಸಗಢದ ಸುಕ್ಮಾ ಜಿಲ್ಲೆಯ ಎರಡು ಕಡೆಗಳಲ್ಲಿ ನಕ್ಸಲ ಅಡಗುದಾಣಗಳನ್ನು ಭದ್ರತಾ ಪಡೆಗಳು ಭೇದಿಸಿದ್ದಾರೆ. ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಆರ್‌ಪಿಎಫ್, ಕೋಬ್ರಾ ಮತ್ತು ಬಸ್ತಾರ್ ಬೆಟಾಲಿಯನ್‌ಗಳ ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ಕಿಸ್ತರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ತೊಂಡಮಾರ್ಕ ಮತ್ತು ಡಬ್ಬಮಾರ್ಕ ಹಳ್ಳಿಗಳಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೇನಾ ಪಡೆಗಳ ದಾಳಿ ವೇಳೆ 350 ಗ್ರಾಂ ಜಿಲೆಟಿನ್ ಸ್ಟಿಕ್ಸ್, 105 ಎಲೆಕ್ಟ್ರಿಕ್ ಡೆಟೊನೇಟರ್ಸ್, ಬ್ಯಾರೆಲ್ ಗ್ರೆನೇಡ್ ಲಾಂಚರ್(ಬಿಜಿಎಲ್), 22 ಬಿಜಿಎಲ್ ಪ್ರೊಜೆಕ್ಟರ್‌ಗಳು, 19 ಬಿಜಿಎಲ್ ಬಾಂಬ್‌ಗಳು, 5 ಕೆ.ಜಿ ತೂಕದ ಸುಧಾರಿತ ಸ್ಫೋಟಕ ಸಾಧನ, 30 ಕೆ.ಜಿ ಗನ್ ಪೌಡರ್ ಮತ್ತು ಮಾವೋವಾದಿಗಳ ಬರಹವಿರುವ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಭದ್ರತಾ ಪಡೆ, 208 ಕಾರ್ಪ್ಸ್ ಕೋಬ್ರಾ, 217 ಮತ್ತು 212, 241 ಕಾರ್ಪ್ಸ್ ಸಿಆರ್‌ಪಿಎಫ್, ಬಸ್ತಾರ್ ಬೆಟಾಲಿಯನ್ ಪಡೆಗಳು ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಸ್ಟಿಕ್‌ಗಳು, ಡಿಟೋನೇಟರ್‌ಗಳು, ಸ್ಫೋಟಕಗಳು, ಐಇಡಿ, ಬಿಜಿಎಲ್ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳ ಜೊತೆಗೆ ಬಟ್ಟೆ, ಚೀಲಗಳು, ಮಾವೋವಾದಿ ಸಾಹಿತ್ಯ, ಶೂಗಳು, ಕಾರ್ಡೆಕ್ಸ್ ವೈರ್, ಮೈಕ್ರೋಟೆಕ್ ಇನ್ವರ್ಟರ್ ಯುಪಿಎಸ್, ಸಿಡಿಮದ್ದುಗಳು, ಡ್ರೈವಿಂಗ್ ಲೈಸೆನ್ಸ್, ಬೆಲ್ಟ್‌ಗಳು, ಅಮುಲ್ ಹಾಲಿನ ಪುಡಿ, ಕಾರ್ಬನ್ ಪೇಪರ್, ಟೇಪ್, ಮ್ಯಾಚ್‌ಬಾಕ್ಸ್, ವೆಲ್ಡಿಂಗ್ ರಾಡ್‌ಗಳು, ಪ್ಲಾಸ್ಟಿಕ್ ಹಾಳೆಗಳು, ವೈರ್, ಸ್ವಿಚ್‌ಗಳು, ಪ್ಲಗ್‌ಗಳು, ಕಬ್ಬಿಣದ ಮೊಳೆಗಳು , ಬಡಗಿ ಉಪಕರಣಗಳು, ಕಬ್ಬಿಣದ ಸರಳುಗಳು, ಜಿಲೆಟಿನ್, ಗನ್ ಪೌಡರ್, ಸುಧಾರಿತ ಗ್ರೆನೇಡ್ ಮತ್ತು ಇತರ ನಕ್ಸಲೀಯರ ದೈನಂದಿನ ಉಪಯುಕ್ತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ವಶಪಡಿಸಿಕೊಳ್ಳಲಾಗಿದೆ ಎಂದು ಸುಕ್ಮಾ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.

ಡಯಾನ ಹೆಚ್ ಆರ್

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments