Top Newsಕ್ರಿಕೆಟ್ವೈರಲ್ ನ್ಯೂಸ್

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಶ್ರೇಯಾಂಕಾ ಪಾಟೀಲ್

ಆರ್​ಸಿಬಿ ಪ್ಲೇಯರ್ 20 ವರ್ಷದ ಶ್ರೇಯಾಂಕಾ ಪಾಟೀಲ್​ ಈಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸ್ತಿದ್ದಾರೆ. ರಾತ್ರೀರಾತ್ರಿ ದೊಡ್ಡ ಸೆಲೆಬ್ರಿಟಿಯಾಗಿ ಬದಲಾಗಿ ಹೋಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಶ್ರೇಯಾಂಕಾ ಪಾಟೀಲ್​ ಫಾಲೋಯೆರ್ಸ್ ಸಂಖ್ಯೆ 2.6 ಮಿಲಿಯನ್ ಆಗೋಗಿದೆ.

ಮಹಿಳಾ ಐಪಿಎಲ್ ಫೈನಲ್ ಪಂದ್ಯಕ್ಕೆ ಮುನ್ನ ಶ್ರೇಯಾಂಕಾ ಪಾಟೀಲ್​ ಇನ್​ಸ್ಟಾ ಫಾಲೋಯೆರ್ಸ್ ಸಂಖ್ಯೆ ಒಂದೂವರೆ ಮಿಲಿಯನ್​ನಷ್ಟು ಇತ್ತು. ಆದ್ರೆ, ಈಗ ಅದು ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ.

ಶ್ರೇಯಾಂಕಾ ಪಾಟೀಲ್​ ಅವರ ಹಳೆಯ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಲೈಕ್-ಕಾಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ.

ಎರಡು ದಿನಗಳ ಹಿಂದಷ್ಟೇ ಶ್ರೇಯಾಂಕಾ ಪಾಟೀಲ್​ಗೆ ಸ್ಟಾರ್ ಕ್ರಿಕೆಟರ್​ ವಿರಾಟ್ ಕೊಹ್ಲಿ ಅಭಿನಂದನೆ ಕೂಡ ತಿಳಿಸಿದ್ರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್​ಸಿಬಿಯ ಸ್ಟಾರ್ ಬೌಲರ್​ ಶ್ರೇಯಾಂಕಾ ಪಾಟೀಲ್ ನಾಲ್ಕು ವಿಕೆಟ್ ಪಡೆದು ತಂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಂದ ಹಾಗೇ, ಮಹಿಳಾ ಐಪಿಎಲ್ ಟೂರ್ನಿಯ ಅರಂಭದಲ್ಲಿ ಶ್ರೇಯಾಂಕಾ ಪಾಟೀಲ್ ಹಾದಿ ಸುಗಮವಾಗಿಯೇನು ಇರಲಿಲ್ಲ. ಗಾಯದ ಸಮಸ್ಯೆ ಕಾರಣ ಒಮದೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ನಂತರ ಫಿಟ್ ಆಗಿ ತಂಡಕ್ಕೆ ಮರಳಿದ್ದರು. ಫೈನಲ್ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿ ಕಮಾಲ್ ಮಾಡಿದ್ದರು.

ಇದನ್ನು ನೋಡಿ

https://www.youtube.com/shorts/mM85oOvaKe0?si=DdVNEWDyxkSw0KfW

Comments (0)

Your email address will not be published. Required fields are marked *

Back to top button