ರಾಜಕೀಯರಾಜ್ಯಸಿನಿಮಾಸುದ್ದಿ

ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆ ಶಿವಕುಮಾರ್​

ಬೆಂಗಳೂರು: ಬಿಗ್​ ಬಾಸ್​ ರಿಯಾಲಿಟಿ ಶೋ ನಡೀತಿದ್ದ ಜಾಲಿವುಡ್ ​ಗೆ ಬೀಗ ಹಾಕಿದ ಕ್ರಮದ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಇದರ ನಡುವೆ ಬಿಗ್ ಬಾಸ್​ ಬಂದ್ ಮಾಡಿಸಿದ ನಟ್ಟು-ಬೋಲ್ಟ್​ ಮಿನಿಸ್ಟರ್​ ಡಿಕೆ ಶಿವಕುಮಾರ್​ ಸೇಡು ತೀರಿಸಿಕೊಂಡಿದ್ದಾರೆ ಎಂದು ಜೆಡಿಎಸ್​​ ಆರೋಪ ಮಾಡಿತ್ತು.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಜೆಡಿಎಸ್‌ನವರ ನಟ್ಟು ಬೋಲ್ಟ್‌ ಆರೋಪಕ್ಕೆ ಮಾತನಾಡಿದ ಅವರು, ಅವರಿಗೆ ಶಕ್ತಿ ಬೇಕು ಎಂದಾಗ ನನ್ನ ಹೆಸರು ತೆಗೆದುಕೊಳ್ಳುತ್ತಾರೆ. ಜಾಲಿವುಡ್‌ ಸ್ಟುಡಿಯೋ ಉದ್ಘಾಟನೆಯನ್ನು ನಾನೇ ಮಾಡಿದ್ದೇನೆ. ಕುಮಾರಸ್ವಾಮಿಯಾದ್ರೂ ಆರೋಪ ಮಾಡಲಿ. ಮೇಲೆ ಇರುವವರನ್ನು ಕರಕೊಂಡು ಬಂದರೂ ನಾನು ತಲೆಕೆಡೆಸಿಕೊಳ್ಳುವುದಿಲ್ಲ ಎಂದರು.

ಬಿಗ್​​ ಬಾಸ್​ ಮನೆಗೆ ಬೀಗ ಹಾಕಿರುವ ಬಗ್ಗೆ ನಾವು ವಿಚಾರಣೆ ನಡೆಸಿದ್ದೇನೆ. ಜನರಿಗೆ ಮನರಂಜನೆ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಜನರಿಗೆ ಇಲ್ಲಿ ಮನರಂಜನೆಯೂ ಮುಖ್ಯ, ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ. ಬಿಗ್ ಬಾಸ್​ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆಯೂ ಡಿಸಿಗೆ ಸೂಚನೆ ನೀಡಿರುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

 

Comments (0)

Your email address will not be published. Required fields are marked *

Back to top button