ಕಾಂತಾರ ಸುಂದರಿ ನಟಿ ಸಪ್ತಮಿ ಗೌಡ ಇತ್ತೀಚೆಗೆ ಹಳ್ಳಿಯ ಪ್ರದೇಶದಲ್ಲಿ ನಿಂತು ಮುದ್ದಾಗಿ ಪೋಟೋಶೂಟ್ ಮಾಡಿಸಿದ್ದಾರೆ. ಹಳ್ಳಿಯ ಸುತ್ತಾ ಓಡಾಡುತ್ತಾ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಈ ನಟಿ ಕೆಲವು ದಿನಗಳ ಹಿಂದೆ ಹಳ್ಳಿ ಕಡೆಗೆ ಪಯಣ ಬೆಳೆಸಿ ಅಲ್ಲಿ ತಮ್ಮ ಸಮಯ ಕಳೆಯುವುದರ ಜೊತೆಗೆ ಕ್ಯೂಟ್ ಫೋಟೋಶೂಟ್ ಮಾಡಿಸಿದ್ದಾರೆ. ಪಿಂಕ್ ಕಲರ್ ಪ್ರಿಂಟೆಡ್ ಸಲ್ವಾರ್ ಧರಿಸಿವುದರ ಜೊತೆಗೆ ಬ್ಲಾಕ್ ಮಟೆಲ್ ಜುಂಕಿ ಹಾಗೂ ಬಳೆಗಳನ್ನು ಹಾಕಿಕೊಂಡು ಅಂದವಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಫ್ರೀ ಹೇರ್ ವಿತ್ ನ್ಯೂಡ್ ಮೇಕಪ್ನಲ್ಲಿ ಸುಂದರವಾಗಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.
ಮೂಗುತಿ ಚೆಲುವೆ ಹಳ್ಳಿಯ ಮನೆಯಲ್ಲಿಯೂ ಫೋಟೊಶೂಟ್ ಮಾಡಿಸುತ್ತಾ, ಊರೆಲ್ಲಾ ತಿರುಗುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ. ಸೂರ್ಯ ಕಿರಣದ ಜೊತೆ ನಲಿಯುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ಪೋಸ್ಟ್ ಮಾಡುವಾಗ ಕ್ಯಾಪ್ಶನ್ನಲ್ಲಿ ಹಳ್ಳಿ ಹುಡುಗಿ ಎಂದು ಬರೆದುಕೊಂಡಿದ್ದಾರೆ. ಮಗಳ ಮುದ್ದಾದ ಪೋಸ್ಗಳಿಗೆ ಅಮ್ಮ ಕ್ಯಾಮೆರಾ ಕ್ಲಿಕ್ ಮಾಡಿದ್ದಾರೆ.
ಹಳ್ಳಿಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಫೋಟೋಗಳಿಗೆ ಸಾವಿರಾರು ಲೈಕ್ಸ್ ಹಾಗೂ ಕಮೆಂಟ್ಗಳ ನದಿಯೇ ಹರಿದಿದೆ. ಫೋಟೋಸ್ ನೋಡಿದ ನೆಟ್ಟಿಗರು, ಓಹ್ ಹೆಣ್ಮಗು ಹೆಣ್ಮಗು, ಯಾವ ಹಳ್ಳಿ ಬಂಗಾರ ನಿಂದು ಎಂದು ಕೇಳಿದರೇ.