‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಸಿನಿಮಾದ ಶೂಟಿಂಗ್ ತೊಡಗಿಸಿಕೊಂಡಿರುವ ಸಾಯಿ ಪಲ್ಲವಿ ಈಗ ತೆಲುಗಿನ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರೌಡಿ ಬಾಯ್ಗೆ ಸಾಯಿ ಪಲ್ಲವಿ ನಾಯಕಿಯಾಗಲು ಸಜ್ಜಾಗಿದ್ದಾರೆ.
ಖುಷಿ, ಫ್ಯಾಮಿಲಿ ಸ್ಟಾರ್ ನಟ ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಎಂದು ಸುದ್ದಿ ಹರಿದಾಡುತ್ತಿದೆ. ವಿಜಯ್ ಜೊತೆ ಸಾಯಿ ಪಲ್ಲವಿ ಜೋಡಿಯಾಗಿ ತೋರಿಸಲು ಡೈರೆಕ್ಟರ್ ರವಿ ಕಿರಣ್ ಕೋಲಾ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಒಂದು ವಿಭಿನ್ನ ಕಥೆಯನ್ನು ತೋರಿಸಲು ರವಿಕಿರಣ್ ಹೊರಟಿದ್ದಾರೆ. ವಿಜಯ್ಗೆ ಸಾಯಿ ಪಲ್ಲವಿ ಸೂಕ್ತ ನಾಯಕಿ ಎಂದು ಚಿತ್ರತಂಡ ಯೋಚಿಸಿ ನಟಿಯನ್ನು ಸಂಪರ್ಕಿಸಿದೆ. ಸಾಯಿ ಪಲ್ಲವಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com
Phone Number : +91-9164072277
Email id : salesatfreedomtv@gmail.com