ರಾಯಚೂರು : ಜಮೀನಿಗಾಗಿ ಅಣ್ಣ ತಮ್ಮಂದಿರ ಮಧ್ಯೆ ನಡೆದ ಗುಂಪು ಘರ್ಷಣೆಯಲ್ಲಿ ಕಿರಿಯ ತಮ್ಮನ ಹತ್ಯೆಯಾಗಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಿನೂರು ಗ್ರಾಮದಲ್ಲಿ ನಡೆದಿದೆ.
2 ಎಕರೆ 10 ಗುಂಟೆ ಜಮೀನು ವಿಚಾರಕ್ಕಾಗಿ ಅಣ್ಣ ತಮ್ಮಂದಿರ ಮಧ್ಯೆ ನಡೆದ ಗುಂಪು ಘರ್ಷಣೆಯಲ್ಲಿ ಕಿರಿಯ ತಮ್ಮನ ಹತ್ಯೆಯಾಗಿದ್ದು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಿನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಜಿನೂರು ನಿವಾಸಿ ರಾಮಣ್ಣ(36) ಘರ್ಷಣೆಯಲ್ಲಿ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ರಾಮಣ್ಣ, ಮೂಕಯ್ಯ, ಮುದಕಯ್ಯ ಈ ಮೂವರು ಸಹೋದರರ ಘರ್ಷಣೆಯಾಗಿದೆ.
ಜಮೀನನ್ನ ರಾಮಣ್ಣ ಅತಿಕ್ರಮಣ ಮಾಡಿಕೊಂಡಿದ್ದಾನೆ ಅಂತ ಆರೋಪ ಕೆಳಿಬಂದಿತ್ತು. ಇದೇ ವಿಚಾರಕ್ಕೆ ಮೂಕಯ್ಯ, ಮುದಕಯ್ಯ ಸೇರಿ ರಾಮಣ್ಣ ಜೊತೆ ಜಗಳಕ್ಕೆ ಮುಂದಾಗಿದ್ದಾರೆ. ರಾಮಣ್ಣ ಉಳುಮೆ ಮಾಡ್ತಿದ್ದ ವೇಳೆ ಇಬ್ಬರೂ ಸಹೋದರರು ಹೊಲಕ್ಕೆ ತೆರಳಿದ್ದಾರೆ. ಬಳಿಕ ಕೊಡಲಿ,ದೊಣ್ಣೆಯಿಡಿದು ಮೂವರು ಕುಟುಂಬಸ್ಥರ ಮಧ್ಯೆ ಬಡಿದಾಟ ಶುರುವಾಗಿದೆ.
ಗುಂಪು ಘರ್ಷಣೆಯಲ್ಲಿ ರಾಮಣ್ಣನಿಗೆ ಕೊಡಲಿಯಿಂದ ಹೊಡೆದು ಹಲ್ಲೆ ಮಾಡಲಾಗಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಾಮಣ್ಣ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.