ಪಾವಗಡ : ಬೆಳಗ್ಗೆ ಎತ್ತಿನಹಳ್ಳಿ ಹಾಗೂ ಬೋದಿ ಬೆಟ್ಟ ಹತ್ತಿರ ಇರುವ ಬೆಟ್ಟದ ಹತ್ತಿರ ಐದರಿಂದ, ಆರು ಕರಡಿಗಳು ಗುಂಪಾಗಿ ಬೆಟ್ಟ ಹತ್ತುತ್ತಿರುವಂತಹ ದೃಶ್ಯ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಇತ್ತೀಚಿಗೆ ನಾವು ಕಾಡುಪ್ರಾಣಿಗಳನ್ನ ನೋಡುವುದೇ ಅಪರೂಪವಾಗಿದೆ. ಮನುಷ್ಯ ತನ್ನ ದುರಾಸೆಯಿಂದಾಗಿ ಕಾಡನ್ನೆಲ್ಲಾ ಕಡಿದು ಪ್ರಾಣಿಗಳು ಇರುವಂತಹ ಅರಣ್ಯ ಪ್ರದೇಶಗಳನ್ನ ಹಾಳುಮಾಡಿದ್ದಾನೆ.
https://www.facebook.com/reel/460393719765089?mibextid=0VwfS7
ಹಾಗೂ ಅವುಗಳನ್ನ ಬೇಟೆಯಾಡಿ ಆಹಾರವನ್ನಾಗಿ ಮಾಡಿಕೊಂಡು ಅವುಗಳ ವಿನಾಶಕ್ಕೂ ಸಹ ಕಾರಣವಾಗಿದ್ದಾನೆ.

ಇತ್ತೀಚಿಗಂತೂ ನಾವು ಪ್ರಾಣಿಗಳನ್ನ ಕಾಡಿನಲ್ಲಿ ನೋಡುವುದಿರಲಿ, ವನ್ಯಜೀವಿಧಾಮಗಳಲ್ಲೂ ಸಹ ನೋಡಲು ಅಸಾಧ್ಯವಾಗುವಂತಹ ಸ್ಥಿತಿ ಎದುರಾಗಿದೆ. ಮೃಗಾಲಯಗಳಲ್ಲೂ ಇತ್ತೀಚಿಗೆ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಬಳ್ಳಂಬೆಳಗ್ಗೆ ಕರಡಿಗಳ ಗುಂಪೊಂದು ಬೆಟ್ಟ ಹತ್ತುತ್ತಿರುವಂತಹ ದೃಶ್ಯ ಸೆರೆಯಾಗಿದ್ದು, ಇದೊಂದು ಅಪರೂಪದ ದೃಶ್ಯ ಎಂದು ಹೇಳಬಹುದಾಗಿದೆ. ಹಾಗೂ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.



