ಮುಂಬೈ: ಯುಗಾದಿ ಹಬ್ಬಕ್ಕೆ ಸಿದ್ಧತೆ ನಡೆಸಿರುವಂತೆಯೇ ಅತ್ತ ಚಿನಿವಾರ ಪೇಟೆಯಲ್ಲಿ ಸದ್ದೇ ಇಲ್ಲದೇ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.
ಹೌದು.. ರಾಜ್ಯದಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಬಂಗಾರದ ಧಾರಣೆ ಸೋಮವಾರ ಮತ್ತಷ್ಟು ಏರಿಕೆ ಕಂಡಿದ್ದು, ಕಳೆದ ಶನಿವಾರ ಏರಿಕೆ ಕಂಡಿದ್ದ ಹಳದಿ ಲೋಹದ ದರ ಇಂದು ಮತ್ತೆ ಏರಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 30 ರೂ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 33 ರೂ ಏರಿಕೆಯಾಗಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್ ಚಿನ್ನ 6,565 ರೂ ಇದ್ದು, ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 7,162 ರೂ ಆಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಯೂ ಚಿನ್ನದ ಬೆಲೆ ಏರಿಕೆಯಾಗುವ ಅಂದಾಜಿತ್ತು. ಅದರಂತೆ ಹಬ್ಬದ ಹಿಂದಿನ ದಿನವೇ ಚಿನ್ನದ ದರ ಏರಿಕೆಯಾಗಿದೆ.
ಈ ಹಿಂದೆ ಮಾರ್ಚ್ 30 ರಂದು 22 ಕ್ಯಾರೆಟ್ ಚಿನ್ನದ ದರ 6,290 ರೂ ಮತ್ತು 24 ಕ್ಯಾರೆಟ್ ಚಿನ್ನದ ದರ 6,860 ರೂ ಗಳಷ್ಟಿತ್ತು.