ಕಳೆದ 15-20 ದಿನದಿಂದ ಮನೆಯಿಂದ ಹೊರಗೆ ಕಾಲಿಡೋಕೂ ಆಗ್ತಿಲ್ಲ ಅಷ್ಟು ಬಿಸಿಲಿದೆ. ಮಧ್ಯಾಹ್ನದ ಹೊತ್ತಿಗೆ 10 ನಿಮಿಷ ಏನಾದ್ರೂ ಬಿಸಿಲಲ್ಲಿ ನಿಂತ್ರೆ ನಾವು ಸುಟ್ಟು ಕರಕಲಾದ ರೊಟ್ಟಿಯಂತೆ ಆಗೋದು ಪಕ್ಕಾ.. ಮನೆ ಕಟ್ಟಿಕೊಂಡು ವಾಸ ಮಾಡೋ ನಮಗೇ ಇಷ್ಟು ಕಷ್ಟ ಆಗ್ತಿರಬೇಕಾದ್ರೆ, ಇನ್ನು ಕಾಡಲ್ಲಿ, ಝೂಗಳಲ್ಲಿ, ಬಯಲಲ್ಲಿ ವಾಸಿಸೋ ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಇನ್ನೇನು ಆಗಿರಬೇಡ. ಒಂದ್ಕಡೆ ಬಿಸಿಲು, ಇನ್ನೊಂದ್ಕಡೆ ಕುಡಿಯೋದಕೂ ನೀರು ಸಿಗ್ತಿಲ್ಲ. ವನ್ಯಜೀವಿಗಳು ಈ ಬೇಸಿಗೆಯಿಂದ ಬಳಲಿ ಹೋಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಝೂನಲ್ಲಿರೋ ಪ್ರಾಣಿ ಪಕ್ಷಿಗಳ ಪರಿಸ್ಥಿತಿಯೂ ಇದೇ ಆಗಿದೆ. ಮೃಗಾಲಯದ ವನ್ಯಜೀವಿಗಳಿಗೆ, ನೀರು ಆಹಾರ ಕೊಡೊದೇ ಸವಾಲಾಗಿದೆ. ಬಿಸಿಲಿನ ಬೇಗೆಗೆ ಈ ಮೃಗಾಲಯದ ಜೀವಿಗಳು ತತ್ತರಿಸಿದೆ. ಹೀಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೀವಿಗಳ ಬಾಯಾರಿಕೆ ತಪ್ಪಿಸಲು ಹೊಸ ಪ್ಲ್ಯಾನ್ ಮಾಡಿದ್ದಾರೆ.
ಬನ್ನೇರುಘಟ್ಟ ಸುತ್ತಮುತ್ತ ಬರೋಬ್ಬರಿ 36-38 ಡಿಗ್ರಿ ಸೆಲ್ಸಿಯಸ್ ವಾತಾವರಣ ಇದೆ. ಈ ತಾಪಮಾನದಿಂದ ರಕ್ಷಿಸಲು ಪ್ರಾಣಿಗಳಿಗೆ ಐಸ್‌ಕ್ಯಾಂಡಿ ಕೊಡಲಾಗ್ತಿದೆ.. ಜಿಂಕೆ, ಮಂಗಗಳು, ಕರಡಿಗಳಿಗೆ ವಿಶೇಷ ಐಸ್‌ಕ್ಯಾಂಡಿ ತಿನ್ನಿಸಲಾಗ್ತಿದೆ.
ಎಲ್ಲ ಬಗೆಯ ಹಣ್ಣು, ತರಕಾರಿ ಬಳಸಿ ಲಾಲಿಪಲ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಹೊಸ ಬಗೆಯ ಆಹಾರವನ್ನು ಪ್ರಾಣಿಗಳಿಗೆ ನೀಡಲಾಗ್ತಿದೆ. ಈ ತಂಪಾದ ಪೌಷ್ಟಿಕ ಆಹಾರ ತಿಂದು ಪ್ರಾಣಿಗಳೂ ಕೂಲ್ ಕೂಲ್ ಆಗಿ ಖುಷಿಯಾಗಿವೆ.
By…ಡಯಾನ ಹೆಚ್ ಆರ್