ರಾಜಕೀಯರಾಜ್ಯಸುದ್ದಿ

ಡಾ. ಬಸವರಾಜ್​ಗೆ ಶಾಕ್​ ; ಅರುಣ ಲಕ್ಷ್ಮಿಗೆ ಕೊಪ್ಪಳ ಲೋಕಸಭೆ ಟಿಕೆಟ್?

ಕೊಪ್ಪಳ : ಕೊಪ್ಪಳ ಲೋಕಸಭೆ ಟಿಕೆಟ್ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಜನಾರ್ಧನ ರೆಡ್ಡಿಯವರ ಪತ್ನಿ ಅರುಣ ಲಕ್ಷ್ಮಿ ಇವರಿಗೆ ಟಿಕೆಟ್ ನೀಡುವುದು ಪಕ್ಕಾ ಎಂದು ಹೇಳಲಾಗ್ತಿದೆ. ಇದರಿಂದಾಗಿ ಸದ್ಯ ಟಿಕೆಟ್ ನೀಡಲಾಗಿರುವ ಡಾ  ಬಸವರಾಜ್​ಗೆ ಶಾಕ್ ಆಗಿದೆ.

ಇದಲ್ಲದೇ ಈಗಾಗಲೇ ಹಾಲಿ ಸಂಸದ ಸಂಗಣ್ಣ ಕರಡಿ ತಮ್ಮ ಬದಲು ಡಾ. ಬಸವರಾಜ್ ಟಿಕೆಟ್ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ವಿರುದ್ದ ಬಂಡಾಯವೆದ್ದಿದ್ದಾರೆ ಅಲ್ಲದೇ ಪ್ರಭಾಕರ್​ ಸಹ ಈ ಕ್ಷೇತ್ರದಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಇಬ್ಬರ ನಡುವೆ ಮೂರನೆಯವರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್​ ತೀರ್ಮಾನಿಸುತ್ತಿದೆ.

ಹೀಗಾಗಿ ಜನಾರ್ಧನ ರೆಡ್ಡಿ ಇಂದು ಬಿಜೆಪಿ ಸೇರ್ಪಡೆಯ ನಂತರ, ಕೊಪ್ಪಳ ಲೋಕಸಭೆ ಟಿಕೆಟ್ ಅವರ ಪತ್ನಿ ಅರುಣ ಲಕ್ಷ್ಮಿ ನೀಡಲಿದ್ದಾರೆ ಎನ್ನಲಾಗ್ತಿದೆ. ಅರುಣ ಲಕ್ಷ್ಮಿ ಟಿಕೆಟ್ ನೀಡಿದಲ್ಲಿ ಮುಂದೆ ಸಂಗಣ್ಣ ಕರಡಿಯವರಾಗಲಿ, ಡಾ  ಬಸವರಾಜ್ ಅವರಾಗಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

Comments (0)

Your email address will not be published. Required fields are marked *

Back to top button