ಕಾರವಾರ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಪ್ರಾರ್ಥಿಸಿರುವ ಮೋದಿ ಅಭಿಮಾನಿಯೊಬ್ಬ ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.
ಅರುಣ್ ವರ್ಣೇಕರ್, ಕಾಳಿ ಮಾತೆಗೆ ಎಡಗೈ ಬೆರಳನ್ನು ಅರ್ಪಿಸಿದ ಅಭಿಮಾನಿ. ಸೋನಾರವಾಡ ವಾಸಿಯಾಗಿರುವ ಅರುಣ್ ವರ್ಣೇಕರ್ ಅವಿವಾಹಿತನಾಗಿದ್ದು, ಪ್ರಧಾನಿ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾನೆ.
ಮನೆಯಲ್ಲಿ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ದಿನಾಲೂ ಪೂಜೆ ಮಾಡುತ್ತಾ ಬಂದಿರುವ ಅರುಣ್. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಕಾಳಿಮಾತೆಗೆ ಬೇಡಿಕೊಂಡಿದ್ದಾರೆ. ಇದೇ ವೇಳೆ ತನ್ನ ಕೈ ಬೆರಳು ತುಂಡು ಮಾಡಿ, ನೈವೇದ್ಯವಾಗಿ ದೇವಿಗೆ ಅರ್ಪಿಸಿದ್ದಾನೆ.