Thursday, September 11, 2025
18.9 C
Bengaluru
Google search engine
LIVE
ಮನೆರಾಜ್ಯವ್ಯಾಪಾರಸ್ಥರಿಂದ ಸ್ವಯಂ ಘೋಷಿತ ಬಂದ್ !!

ವ್ಯಾಪಾರಸ್ಥರಿಂದ ಸ್ವಯಂ ಘೋಷಿತ ಬಂದ್ !!

ಕಲಬುರಗಿ : ಭೀಮಾ ನದಿಗೆ ನೀರು ಬಿಡುವಂತೆ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕರ್ ಹಾಗೂ ವ್ಯಾಪಾರಸ್ಥರಿಂದ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಮುಂದುವರೆದಿದೆ. ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುವಂತೆ ಒತ್ತಾಯಿಸಿ ಬಂದ್​ ಮಾಡಲಾಗಿದೆ.

ಜೆಡಿಎಸ್​ ಮುಖಂಡ ಶಿವಕುಮಾರ್​ ನಾಟಿಕರ್​ ಹಾಗೂ ವ್ಯಾಪಾರಸ್ಥರು ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯು ಐದನೇ ದಿನಕ್ಕೆ ಮುಂದುವರೆದಿದೆ. ಸತ್ಯಾಗ್ರಹಕ್ಕೆ ಬೆಂಬಲಿಸಿ ಇಂದು ಅಫಜಲಪೂರ ವ್ಯಾಪಾರಸ್ಥರಿಂದ ಸ್ವಯಂ ಘೋಷಿಸಿತ ಬಂದ್​ ಮಾಡಲಾಗಿದೆ.

ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ಭೀಮಾ ನದಿ ಸಂಪೂರ್ಣ ಬತ್ತಿದ್ದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಭೀಮಾ ನದಿ ಸಂಪೂರ್ಣ ಬರಿದಾಗಿರುವುದರಿಂದ ಅಫಜಲಪೂರ ,ಜೇವರ್ಗಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments