ಬಿಜೆಪಿ ದೊಡ್ಡಿಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತೆ ಬೀಳುತ್ತಿದ್ದಾರಾ? ಹೌದು. ಇಂತಹ ಘಟನೆಗೆ ಇದೀಗ ಮತ್ತೆ ರೆಡ್ಡಿ ಸಿದ್ದರಾಗಿದ್ದಾರೆ. ಕಳೆದ ಹತ್ತು ವರ್ಷದಿಂದ ರೆಡ್ಡಿ ಬಿಜೆಪಿಯಿಂದ ದೂರು ಉಳಿದಿದ್ದರು. ಇದೀಗ ಮತ್ತೆ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರೆಡ್ಡಿ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಪಕ್ಷದ ಸಿದ್ದಾಂತ ಒಪ್ಪಿ ಇಂದು ಬಿಜೆಪಿ ಗೆ ರೆಡ್ಡಿ. ಸೇರ್ಪಡೆ ಯಾಗಿದ್ದಾರೆ. ಶ್ರೀರಾಮುಲು, ಆನಂದಸಿಂಗ್ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು. ಈ ಮೊದಲು ಬಿಜೆಪಿಯಿಂದ ಮುನಿಸಿಕೊಂಡು, ಆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜನಾರ್ಧನರೆಡ್ಡಿ, ಬಿಜೆಪಿ ವಿರುದ್ದ ತಮ್ಮದೇ ಆದ ಕೆಕೆಆರ್ಪಿ ಪಕ್ಷ ಕಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧೆ ಮಾಡಿದ್ದರು.
ಆದರೆ, ಇತ್ತೀಚಿಗೆ ದೆಹಲಿಗೆ ಹೋಗಿ, ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಬಂದಿದ್ದ ಜನಾರ್ಧನರೆಡ್ಡಿ ಇದೀಗ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ, ಬಿಜೆಪಿ ದೊಡ್ಡಿಗೆ ಬಿದ್ದಿದ್ದಾರೆ. ಈ ಬಗ್ಗೆ ತಮ್ಮ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಗೊಂಡಿದ್ದಾರೆ. ಹೀಗಾಗಿ ಇಂದು ಜನಾರ್ಧನರೆಡ್ಡಿ ಬಿಜೆಪಿ ದೊಡ್ಡಿಗೆ ಮತ್ತೆ ಬಿದ್ದಿದ್ದಾರೆ.