ಹುಬ್ಬಳ್ಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರು ಹತ್ತು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೋಶಿಯವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಿಂಗಾಲೇಶ್ವರ ಶ್ರೀಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ಮನವೊಲಿಸೋ ಕೆಲಸ ಮಾಡ್ತೀವಿ. ಆಕಸ್ಮಾತ್ ಮನವೊಲಿಕೆ ಆಗದೆ ಹೋದ್ರೆ ನಾವು ಚುನಾವಣೆಗೆ ಹೋಗುತ್ತೇವೆ ಎಂದರು.
ಶಾಸಕ ವಿನಯ ಕುಲಕರ್ಣಿ ಅವರು ಹಿಟ್ಲರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರನ್ನೆ ಆಗಲಿ ಹಿಟ್ಲರ್ ಹೋಲಿಕೆ ಮಾಡಬಾರದು ಎಂದು ವಿನಯ ಕುಲಕರ್ಣಿ ಅವರಿಗೆ ಟಾಂಗ್ ನೀಡಿದರು. ವಿನಯ್ ಕುಲಕರ್ಣಿ ಅವರ ವಿಚಾರ ಏನಾಗಿದೆ ಎಂಬುದು ಗೊತ್ತಿದೆ. ಲೋಕಸಭೆಯಲ್ಲಿ ಅನೇಕ ಜನ ಟಿಕೆಟ್ ಕೇಳಿದ್ರು, ಇಂದು ಜೋಶಿಯವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ನಾವು ಒಟ್ಟಾಗಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದರು.