ಹುಬ್ಬಳ್ಳಿ : ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಬೈದಿದ್ದರೆ, ಸಚಿವ ಸಂತೋಷ ಲಾಡ್ ಅವರು ತಮ್ಮ ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ ಎನ್ನುವ ಮೂಲಕ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿ ಟಾಂಗ್ ನೀಡಿದ್ದಾರೆ.
ಕಳೆದ ಸೋಮವಾರದಂದು ಧಾರವಾಡದ ಕಲಘಟಗಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಹ್ಲಾದ ಜೋಶಿಯವರು ಕಾರ್ಯಕರ್ತರ ಸಭೆ ನಡೆಸಿದ್ದು, ಸಭೆಯಲ್ಲಿ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ಹೇಳಿಕೆಯನ್ನು ಪ್ರಸ್ತಾಪಿಸಿ ಸಂತೋಷ ಲಾಡ್ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಜೋಶಿಯರನ್ನು ಸಚಿವ ಲಾಡ್ ನಿರಂತರ ಟೀಕೆಯ ಹಿಂದೆ ಅವರು ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನವಿದೆ.
ಈ ಹಿಂದೊಮ್ಮೆ ನನಗೆ ಫ್ಲೈಟ್ ನಲ್ಲಿ ಸಂತೋಷ ಲಾಡ್ ಅವರು ಸಿಕ್ಕಿದ್ದರು, ಆಗ ನಾನು ಅವರಿಗೆ ನನ್ನನ್ನು ಬೈದರೆ ಸರಿ ಮೋದಿಗೆ ಯಾಕೆ ಟೀಕೆ ಎಂದು ಪ್ರಶ್ನೆ ಮಾಡಿದ್ದೆ. ಆಗ ಅವರು ಖುದ್ದಾಗಿ ನಮ್ಮ ಹೈಕಮಾಂಡ್ ಆರ್ಡರ್ ಇದೆ ಸಾಬ್ ಎಂದು ಹಿಂದಿಯಲ್ಲಿ ಹೇಳಿದ್ದರು. ಆಗಿನಿಂದ ನಾನು ತಲೆ ಕೆಡಿಸಿಕೊಂಡಿಲ್ಲ, ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಹೇಳಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಉಸ್ತುವಾರಿ ಸಚಿವ ಲಾಡ್ ಕ್ಷೇತ್ರದಲ್ಲೇ ಲಾಡ್ ಗೆ ಟಾಂಗ್ ನೀಡಿದ ಜೋಶಿ!
RELATED ARTICLES