Wednesday, January 28, 2026
16.4 C
Bengaluru
Google search engine
LIVE
ಮನೆಧರ್ಮಬಾಲರಾಮನಿಗೆ ಸೂರ್ಯ ತಿಲಕ

ಬಾಲರಾಮನಿಗೆ ಸೂರ್ಯ ತಿಲಕ

ಉತ್ತರ ಪ್ರದೇಶ : ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿದೆ. 500 ವರ್ಷಗಳ ಬಳಿಕ ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲೇ ಅದ್ಧೂರಿಯಾಗಿ ರಾಮನವಮಿ ಆಚರಣೆ ನಡೆಯುತ್ತಿದ್ದು, ಐತಿಹಾಸಿಕ ಕ್ಷಣಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ.

ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿದ್ದುಈ ಮೂಲಕ ಗರ್ಭಗುಡಿ ಬಾಗಿಲು ತೆರೆದಿದೆ, ರಾತ್ರಿ 11 ರ ತನಕವೂ ಬಾಲರಾಮ ಭಕ್ತರಿಗೆ ದರ್ಶನವನ್ನು ನೀಡಲಿದ್ದಾನೆ. ರಾಮ ಮಂದಿರ ದಿನ ಬರೋಬ್ಬರಿ 19 ಗಂಟೆಗಳ ಕಾಲ ಮರ್ಯಾದಾ ಪುರುಷೋತ್ತಮ ಮಂದಿರ ಓಪನ್ ಇರಲಿದೆ.

ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್ ಪ್ರಸಾದಗಳನ್ನು ಸಿದ್ಧಪಡಿಸಲಾಗಿತ್ತು. ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್ ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಯಿತು. ಬಾಲಕರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳಲಿದ್ದು, ಅಯೋಧ್ಯೆಯಾದ್ಯಂತ 100 ಎಲ್ಇಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments