ಸುದ್ದಿ

ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಮಕ್ಕಳ ದಾರುಣ ಸಾವು !

ಹಾಸನ : ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜೀವನ್ (13), ಸಾತ್ವಿಕ್ (11) ವಿಶ್ವ(12), ಪೃಥ್ವಿ (12 )ಸಾವನ್ನಪ್ಪಿದ್ದ ಮಕ್ಕಳು. ಮೃತ ಮಕ್ಕಳು ಮುತ್ತಿಗೆ ಗ್ರಾಮದವರಾಗಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಕೆರೆಗೆ ಐವರು ಬಾಲಕರು ಈಜಲು ತೆರಳಿದ್ದರು. ಈ ಪೈಕಿ ಓರ್ವ ಬಾಲಕ ಪಾರಾಗಿ ಸಮೀಪದಲ್ಲಿದ್ದವರಿಗೆ ತಿಳಿಸಿದ್ದಾನೆ. ನಿವಾಸಿಗಳು ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಮೃತಪಟ್ಟಿದ್ದಾರೆ.

ಮಕ್ಕಳ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿದ ಶೋಧಕಾರ್ಯ ನಡೆಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button