ಇಂಡಿಯನ್‌ ನೇವಿಯು 2024ನೇ ಸಾಲಿನ ನವೆಂಬರ್‌ ಬ್ಯಾಚ್‌ನ ಅಗ್ನಿಪಥ ಯೋಜನೆಯ ಅಗ್ನಿವೀರ್‌ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಪ್ರತಿವರ್ಷವು ಸಹ ಭರ್ತಿ ಮಾಡುವ ಈ ಹುದ್ದೆಗಳಿಗೆ ಮೆಟ್ರಿಕ್ಯೂಲೇಷನ್ ಪಾಸಾದವರು ಹಾಗೂ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಈ ಹುದ್ದೆಗಳ ಅಧಿಸೂಚನೆ, ನೇಮಕಾತಿ ಕುರಿತು ವಿಕ ಉದ್ಯೋಗ ಸೆಕ್ಷನ್‌ನಲ್ಲಿ ಮಾಹಿತಿ ನೀಡಲಾಗಿದೆ. ಈ ಲೇಖನದಲ್ಲಿ ಹತ್ತನೇ ತರಗತಿ ಪಾಸಾದವರಿಗೆ ಅಗ್ನಿವೀರರ ಹುದ್ದೆ ಕುರಿತು ಮಾಹಿತಿ ನೀಡಲಾಗಿದೆ.

ನೇಮಕಾತಿ ಪ್ರಾಧಿಕಾರ : ಭಾರತೀಯ ನೌಕಾಪಡೆ
ಹುದ್ದೆ ಹೆಸರು : ಅಗ್ನಿವೀರರು (ಮೆಟ್ರಿಕ್ಯೂಲೇಷನ್‌ ಪಾಸ್)
ಹುದ್ದೆಗಳ ಸಂಖ್ಯೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ವಿದ್ಯಾರ್ಹತೆ
10ನೇ ತರಗತಿ / ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪಾಸ್‌ ಮಾಡಿರಬೇಕು.

ವಯಸ್ಸಿನ ಅರ್ಹತೆ : 01 ನವೆಂಬರ್ 2003 – 30 ಏಪ್ರಿಲ್ 2007 ರ ನಡುವೆ ಜನಿಸಿರಬೇಕು.

ಮೆಟ್ರಿಕ್ಯೂಲೇಷನ್‌ ಅರ್ಹತೆಯ ಅಗ್ನಿವೀರರ ಹುದ್ದೆಗಳಿಗೆ ದೈಹಿಕ ಅರ್ಹತೆಗಳು

ಪುರುಷ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆಂ.ಮೀ ಇರಬೇಕು.
ಮಹಿಳಾ ಅಭ್ಯರ್ಥಿಗಳ ಎತ್ತರ ಕನಿಷ್ಠ 152 ಸೆಂ.ಮೀ ಇರಬೇಕು.

ಇತರೆ ಹೆಚ್ಚಿನ ಮಾಹಿತಿಗಳನ್ನುhttp://www.joinindiannavy.gov.in ಗೆ ಭೇಟಿ ನೀಡಿರಿ.

ಭಾರತೀಯ ನೌಕಾಪಡೆ ಅಗ್ನಿವೀರರ (ಎಂಆರ್) ನೇಮಕಾತಿ ವೇಳಾಪಟ್ಟಿ
ಆನ್‌ಲೈನ್‌ ರಿಜಿಸ್ಟ್ರೇಷನ್ ಸ್ವೀಕಾರ ದಿನಾಂಕ : 13-05-2024
ಅಗ್ನಿವೀರ ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 27-05-2024
ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ : ಆಕ್ಟೋಬರ್ ತಿಂಗಳು
ಮೆಡಿಕಲ್ ಟೆಸ್ಟ್‌ ಮತ್ತು ಚಿಲ್ಕಾ’ದ ಐಎನ್‌ಎಸ್‌ ಘಟಕದಲ್ಲಿ ಸೇರುವ ದಿನಾಂಕ: ನವೆಂಬರ್ ತಿಂಗಳು

Notification

ಭಾರತೀಯ ನೌಕಾಪಡೆಯ ಅಗ್ನಿವೀರ ಹುದ್ದೆ ಕುರಿತ ಪ್ರಮುಖ ವಿವರಗಳು

– 4 ವರ್ಷ ಸೇವೆಯ ಅವಧಿ ಇರುತ್ತದೆ.
– ವಾರ್ಷಿಕ ರೂ.4.76 ಲಕ್ಷದಿಂದ ನಾಲ್ಕನೇ ವರ್ಷದಲ್ಲಿ ರೂ.6.72 ಲಕ್ಷದವರೆಗೆ ವೇತನ ಇರುತ್ತದೆ.
– ಸೇವಾ ನಿಧಿ ಪ್ಯಾಕೇಜ್‌ ಅನ್ನು 4 ವರ್ಷದ ನಿವೃತ್ತಿ ನಂತರ ಟ್ಯಾಕ್ಸ್‌ ಫ್ರೀ ಆಗಿ ರೂ.11.71 ಲಕ್ಷ ನೀಡಲಾಗುತ್ತದೆ.
– ರೂ.48 ಲಕ್ಷ ಇನ್ಸುರೆನ್ಸ್‌ ಪ್ಯಾಕೇಜ್‌ ಇರುತ್ತದೆ.
– ಅಗ್ನಿವೀರ್ ಸ್ಕಿಲ್ ಸರ್ಟಿಫಿಕೇಟ್‌ ಅನ್ನು ನೀಡಲಾಗುತ್ತದೆ.

ನೌಕಾಪಡೆ ಅಗ್ನಿವೀರರ ಹುದ್ದೆಗೆ ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನ: ಡಿಗ್ರಿ ಶಿಕ್ಷಣದ ಜತೆಗೆ ವೇತನ ಸಹಿತ ಜಾಬ್ ಇದು

ನೇವಿ ಅಗ್ನಿವೀರರಿಗೆ ಸಿಗುವ ವೇತನ ಮಾಹಿತಿ
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ಅಗ್ನಿವೀರ ಸೇವೆ ಸಲ್ಲಿಸಿದ ಶೇಕಡ.25 ರಷ್ಟು ಅಭ್ಯರ್ಥಿಗಳನ್ನು ಪ್ರತಿ ಬ್ಯಾಚ್‌ನಿಂದ ರೆಗ್ಯುಲರ್ ಕೇಡರ್‌ಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಉದ್ಯೋಗ ವಿವರ

INR 30000 to 40000 /Month

ಹುದ್ದೆಯ ಹೆಸರು ಭಾರತ ನೌಕಾಪಡೆಯ ಮೆಟ್ರಿಕ್ಯುಲೇಷನ್ ಲೆವೆಲ್ ಅಗ್ನಿವೀರರ ಹುದ್ದೆಗಳು
ವಿವರ ಭಾರತ ನೌಕಾಪಡೆ ನೋಟಿಫಿಕೇಶನ್‌ ಪ್ರಕಟ
ಪ್ರಕಟಣೆ ದಿನಾಂಕ 2024-05-06
ಕೊನೆ ದಿನಾಂಕ 2024-05-27
ಉದ್ಯೋಗ ವಿಧ ಪೂರ್ಣಾವಧಿ
ಉದ್ಯೋಗ ಕ್ಷೇತ್ರ ಕೇಂದ್ರ ಸರ್ಕಾರಿ ಉದ್ಯೋಗ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ
ವಿದ್ಯಾರ್ಹತೆ ಹತ್ತನೇ ತರಗತಿ ಪಾಸ್
ಕಾರ್ಯಾನುಭವ 0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು ಭಾರತೀಯ ನೌಕಾಪಡೆ
ವೆಬ್‌ಸೈಟ್‌ ವಿಳಾಸ https://www.joinindiannavy.gov.in/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸ ಚಿಲ್ಕಾ
ಸ್ಥಳ ಚಿಲ್ಕಾ
ಪ್ರದೇಶ ಒಡಿಶಾ
ಅಂಚೆ ಸಂಖ್ಯೆ 752037
ದೇಶ IND

By Veeresh

Leave a Reply

Your email address will not be published. Required fields are marked *

Verified by MonsterInsights