ಜಪಾನ್ ದೇಶವು ದಾಖಲೆಯ ಶತಾಯುಷಿಗಳನ್ನು ಹೊಂದಿದೆ. ಈ ದೇಶದ 28.7% ದಷ್ಟು ಜನಸಂಖ್ಯೆಯಲ್ಲಿ ಹೆಚ್ಚಿನವರು 65 ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಜನನ ಪ್ರಮಾಣದಲ್ಲಿ ಭಾರೀ ಕುಸಿಯುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಜಪಾನ್ ಸರ್ಕಾರ ಇದೀಗ ಸಿಂಗಲ್ಸ್ಗಳಿಗಾಗಿ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದೆ.
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ, 2060ರ ಹೊತ್ತಿಗೆ, ಜಪಾನ್‌ನ ಪ್ರಸ್ತುತ 125 ಮಿಲಿಯನ್ ಜನಸಂಖ್ಯೆಯು ಕೇವಲ 86.7 ಮಿಲಿಯನ್‌ಗೆ ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ. 50 ವರ್ಷ ವಯಸ್ಸಿನ ಸುಮಾರು 32 ಪ್ರತಿಶತದಷ್ಟು ಪುರುಷರು ಮತ್ತು 24 ಪ್ರತಿಶತ ಮಹಿಳೆಯರು ಅವಿವಾಹಿತರಾಗಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯನ್ನು ಇದೀಗ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದ್ದು, ಈ ಮೂಲಕ ಯುವಜನತೆಯನ್ನು ಮದುವೆಯತ್ತ ಪ್ರೇರೇಪಿಸುತ್ತಿದೆ.
“ಇಳಿಸುತ್ತಿರುವ ಜನನ ಪ್ರಮಾಣವನ್ನು ಏರಿಕೆಯತ್ತ ಕೊಂಡೊಯ್ಯಲು ಟೋಕಿಯೋ ಫುಟಾರಿ ಸ್ಟೋರಿ ಹೆಸರಿನ ಡೇಟಿಂಗ್ ಅಪ್ಲಿಕೇಶನ್ ಜಾರಿಗೆತಂದಿದೆ” ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಮಾಸಾ ಹಯಾಶಿ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಇದಲ್ಲದೆ ಮದುವೆಯಾಗಲು ಮತ್ತು ಮಗು ಹೊಂದಲು ಬಯಸುವವರಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.