Thursday, November 20, 2025
26.6 C
Bengaluru
Google search engine
LIVE
ಮನೆಸಿನಿಮಾರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದ 'ಆಕ್ಟ್ 1978' ಹಿಂದಿಯಲ್ಲಿ ರೀಮೇಕ್?

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಹಿಂದಿಯಲ್ಲಿ ರೀಮೇಕ್?

ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸದ್ಯ ತಮ್ಮ ಕನ್ನಡ ಚಲನಚಿತ್ರ ‘ಆ್ಯಕ್ಟ್ 1978’ ರ ಸಂಭಾವ್ಯ ಹಿಂದಿ ರೀಮೇಕ್ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಮಂಸೋರೆ ಅವರು ಹೊಸ ನಟರ ಗುಂಪು ಮತ್ತು ಹೊಸ ನಿರ್ಮಾಣ ತಂಡದೊಂದಿಗೆ ಕೆಲಸ ಮಾಡುವ ಮೂಲಕ ಹೊಸ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ಉದ್ದೇಶಿಸಿದ್ದಾರೆ. ನಿಖರ ಸಾಂಸ್ಕೃತಿಕ ಅಂಶಗಳನ್ನು ಒಳಗೊಳ್ಳುವ ಮೂಲಕ ಹಿಂದಿ ಮಾತನಾಡುವ ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕ ಸಾಧಿಸುವುದು ಗುರಿಯಾಗಿದೆ. ರೀಮೇಕ್‌ನ ಹಕ್ಕುಗಳನ್ನು ನಿರ್ಮಾಪಕ ನೀರಜ್ ತಿವಾರಿ ಖರೀದಿಸಿದ್ದಾರೆ.

ಆಕ್ಟ್ 1978 ರ ಹಿಂದಿ ರೀಮೇಕ್ ಈ ವರ್ಷ ಸೆಟ್ಟೇರಲಿದೆ. ಆಕ್ಟ್ 1978 ಚಿತ್ರವು 2020ರಲ್ಲಿ ಬಿಡುಗಡೆಯಾಯಿತು. ಇದು ಅಧಿಕಾರಶಾಹಿ ವರ್ಗದ ಅನ್ಯಾಯಗಳನ್ನು ಮೆಟ್ಟಿ ನಿಂತು ಧೈರ್ಯದಿಂದ ಹೋರಾಡುವ ಗರ್ಭಿಣಿಯ ಕಥೆಯನ್ನು ವಿವರಿಸುತ್ತದೆ. ಚಿತ್ರವು ಅದರ ನಿರೂಪಣೆ ಮತ್ತು ಉತ್ತಮ ಅಭಿನಯಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದೆ. ಇದೀಗ ಅದರ ಸಂಭಾವ್ಯ ಹಿಂದಿ ರೂಪಾಂತರದ ವಿಚಾರದಲ್ಲಿ ನಿರೀಕ್ಷೆ ಹುಟ್ಟುಹಾಕಿದೆ.

ಚಿತ್ರದ ಮೂಲ ಪಾತ್ರವರ್ಗದಲ್ಲಿ ಯಜ್ಞ ಶೆಟ್ಟಿ, ಸಂಚಾರಿ ವಿಜಯ್, ಶ್ರುತಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತು ದತ್ತಣ್ಣ ನಟಿಸಿದ್ದರು. ಹಿಂದಿ ಆವೃತ್ತಿಗೆ ಹೊಸ ಸೃಜನಶೀಲ ಆಯಾಮ ಒದಗಿಸುವುದರ ಜೊತೆಗೆ ಮೂಲ ನಿರೂಪಣೆಯ ಸಾರವನ್ನು ಕಾಪಾಡುವುದು ನಿರ್ದೇಶಕರ ಗುರಿಯಾಗಿದೆ. ‘ನಮ್ಮ ಕಥೆಯ ಆಳವನ್ನು ಅಧಿಕೃತವಾಗಿ ತಿಳಿಸುವ ಪ್ರತಿಭಾವಂತ ನಟರಿಗಾಗಿ ನಾವು ಹುಡುಕಾಟದಲ್ಲಿದ್ದೇವೆ, ಏಕೆಂದರೆ ಅದು ಪ್ರಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ’ ಎಂದು ನಿರ್ಮಾಪಕ ತಿವಾರಿ ಹೇಳುತ್ತಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments