ಬೆಂಗಳೂರು : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾದ ರಿಲೀಸ್ ಬಗ್ಗೆ ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಕ್ರೇಜಿ ಅಪ್‌ಡೇಟ್ ಸಿಕ್ಕಿದೆ. ಬಾಲಿವುಡ್‌ಗೆ ಹಾರಲಿದ್ದಾರೆ ಧ್ರುವ ಸರ್ಜಾ.
‘ವಾರ್ 2’ (War 2) ಸಿನಿಮಾದಲ್ಲಿ ಹೃತಿಕ್ ರೋಷನ್ ಅವರ ಸಹೋದರನಾಗಿ ಪವರ್‌ಫುಲ್ ಪಾತ್ರದಲ್ಲಿ ನಟಿಸೋಕೆ ಧ್ರುವಗೆ ಕರೆ ಬಂದಿದೆ ಎಂದು ಸುದ್ದಿ ಹಬ್ಬಿದೆ. ಹೃತಿಕ್, ಜ್ಯೂ.ಎನ್‌ಟಿಆರ್ ಜೊತೆ ಧ್ರುವ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎಂದು ಹೇಳಲಾಗ್ತಿದೆ. ಈಗ ವೈರಲ್ ಆಗಿರುವ ಈ ಸುದ್ದಿ ನಿಜನಾ? ಎಂಬುದನ್ನು ಧ್ರುವ ಅಥವಾ ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ.

4 ವರ್ಷಗಳ ಹಿಂದೆ ‘ವಾರ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ ‘ವಾರ್ 2’ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಚಿತ್ರರಂಗದಲ್ಲಿ ಸೌತ್ ಸಿನಿಮಾಗಳೇ ಗೆಲುವು ಕಾರಣುತ್ತಿರುವುದಕ್ಕೆ ದಕ್ಷಿಣದ ತಾರೆಯರಿಗೆ ಬಾಲಿವುಡ್ ಮಣೆ ಹಾಕ್ತಿದೆ. ಈ ಬಾರಿ ವಾರ್ 2 ಸಿನಿಮಾ ಗೆಲ್ಲುತ್ತಾ? ಕಾಯಬೇಕಿದೆ.