ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದಿಂದ ಚುನಾವಣ ಕಣಕ್ಕೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಇದೀಗ ಕಮ್ಮ ಜನಾಂಗ ಬೆಂಬಲ ಸೂಚಿಸಿದೆ.
ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪದ್ಮನಾಭ ನಗರದಲ್ಲಿ ನಡೆದ ಸಭೆಯಲ್ಲಿ ಕಮ್ಮ ಜನಾಂಗದ ನಾಯಕ ಡಾ. ಗುರಪ್ಪ ನಾಯ್ಡು, ಕಬ್ಬಡಿ ನಾಯ್ಡು, ಎಲ್. ಶ್ರೀನಿವಾಸ್ ಸೇರಿ ಹಲವರು ಸೌಮ್ಯ ರೆಡ್ಡಿಗೆ ಬೆಂಬಲವನ್ನು ಘೋಷಿಸಿದ್ದು ಚುನಾವಣೆಯ ಸಂದರ್ಭದಲ್ಲಿ ಕೈ ಪಾಳಯಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ.