Top Newsಧರ್ಮಸುದ್ದಿ

ರಾಮನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವಿಮಾನದಲ್ಲಿ ಕುಳಿತು ಟ್ಯಾಬ್ ಮೂಲಕ ವೀಕ್ಷಿಸಿದ ಮೋದಿ

ಅಯೋಧ್ಯೆ : ರಾಮಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ ಕಳೆಗಟ್ಟಿತ್ತು. ಬಾಲರಾಮನ ಮೇಲೆ ಸೂರ್ಯಕಿರಣ ಸ್ಪರ್ಶಿಸಿದ್ದನ್ನು ನೋಡಲು ಇಡೀ ದೇಶವೇ ಕಾದು ಕುಳಿತಿತ್ತು. ರಾಮ ನವಮಿಯಂದೇ ಸೂರ್ಯನ ಕಿರಣ ನೇರವಾಗಿ ಬಾಲರಾಮನ ತಿಲಕವನ್ನು ಸ್ಪರ್ಶಿಸುವ  ಮೂಲಕ ರಾಮಭಕ್ತರನ್ನು ಪುಳಕಿತಗೊಳಿಸಿತು.

ಮರ್ಯಾದೆ ಪುರುಶೋತ್ತಮನನ್ನು ನೋಡಲು ಭಕ್ತರ ದಂಡೇ ರಾಮಲಲ್ಲಾದಲ್ಲೇ ಬೀಡುಬಿಟ್ಟಿತ್ತು. ಸಾವಿರಾರು ಭಕ್ತರು ಬಾಲರಾಮನ ಮೇಲೆ ಸೂರ್ಯನ ಕಿರಣಗಳು ಚುಂಬಿಸುವ ದೃಶ್ಯ ನೋಡಿ ಸಂಭ್ರಮಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಯಾಣದ ಸಮಯದಲ್ಲೇ ಬಾಲರಾಮನ ಮೇಲೆ ಸೂರ್ಯತಿಲಕ ದೃಶ್ಯವನ್ನು ವೀಕ್ಷಿಸಿದರು. ಲ್ಯಾಪ್​ಟ್ಯಾಪ್​ ಮುಖಾಂತರ ಸೂರ್ಯನ ಕಿರಣ ಸ್ಪರ್ಶಿಸುವ ದೃಶ್ಯ ನೋಡುವ ಮುನ್ನ ತಮ್ಮ ಶೂಗಳನ್ನು ಬಿಟ್ಟು ರಾಮನನ್ನು ನೆನೆದು ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯ ಕೋರಿದರು.

Comments (0)

Your email address will not be published. Required fields are marked *

Back to top button