ರಾಜಕೀಯಸುದ್ದಿ

ಮಹದಾಯಿ ಬಗ್ಗೆ ಜೋಶಿಯವರು ಉತ್ತರ ನೀಡಲಿ – ಸಲೀಂ ಅಹ್ಮದ್

ಧಾರವಾಡ : ಈ ಹಿಂದೆ ಎಂಎಲ್‌ಎ ಚುನಾವಣೆಗೂ ಮಂಚೆ ಇದೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಹದಾಯಿ ವಿಜಯೋತ್ಸವ ಮಾಡಿದ್ದರು. ಆದರೆ ಇದೂವರೆಗೂ ಅವರಿಗೆ ಫಾರೆಸ್ಟ್ ಕ್ಲೆಯರೇನ್ಸ ಕೊಡಿಸುವುದಕ್ಕೆ ಆಗಿಲ್ಲ. ಇದರ ಬಗ್ಗೆ ಪ್ರಹ್ಲಾದ ಜೋಶಿಯವರು ಉತ್ತರ ನೀಡಲಿ ಎಂದು ಪರಿಷತ್ ಸದಸ್ಯ ಸಲೀಂ ಅಹ್ಮದ್ ಅಗ್ರಹಿಸಿದರು.

ಧಾರವಾಡ ಲೊಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ನಾಮ ಪತ್ರ ಸಕ್ಲಿಕೆಯ ಬಳಿಕ ಮಾಧ್ಯಮಕ್ಇಎ ಪ್ರತಿಕ್ರಿಯೆ ನೀಡಿದ ಅವರು, ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರಿಗೆ ಕ್ಷೇತ್ರದಲ್ಲಿ ಮತ ಕೇಳುವ ನೈತಿಕತೆ ಇಲ್ಲ. ಜೋಶಿಯವರನ್ನು ಸತತವಾಗಿ ನಾಲ್ಕು ಬಾರಿ ಆತ್ಕೆಯಾದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬಿಸುತ್ತಿದೆ ಎಂದು ಹೇಳಿದರು.

ಹಾಗಾಗಿ ಈ ಬಾರಿ ನಮ್ಮ ಪಕ್ಷದ ಬಾವುವನ್ನು ವಿನೋದ್ ಅಸೂಟಿ ಜಯದ ಮೂಲಕ ಹಾಲಿದೆ. ವಿನೋದ ಅಸೂಟಿಯವರ ಗೆಲ್ಲುವಿಗೆ ನಮ್ಮ ಪಂಚ ಗ್ಯಾರಂಟಿಗಳು ಶ್ರೀ ರಕ್ಷಯಾಗಲಿವೆ. ರಾಜ್ಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ, ಬಡವರ ಪರ ಸರ್ಕಾರ ಎಂದು ಜನಗಳೇ ಇಉಗ ಹೇಳುತ್ತಿದ್ದಾರೆ. ಕೇಂದ್ರ ಬಿಜೆಪಿಯಿಂದ ಮಲತಾಯಿ ಧೋರಣೆಯನ್ನು ಮತದಾರರು ಗಮನಿಸುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಮತ ಕೇಳುವ ನೈಕತೆ ಇಲ್ಲ, ರಾಜ್ಯದ ಬರಪರಿಹಾರದಲ್ಲಿ ಮಲತಾಯಿ ಧೋರಣೆ ಕೇಂದ್ರ ಬಿಜೆಪಿ‌ ಮಾಡಿದೆ ಎಂದರು.

ಕೇಂದ್ರ ಬಿಜೆಪಿ ಸರ್ಕಾರ ಆಡಳಿತ ಸಂಪೂರ್ಣ ವಿಫಲವಾಗಿದೆ. ಬೆಲೆ ಏರಿಕೆ ನಿಯಂತ್ರಣ ಮಾಡಲಿಲ್ಲ, ಯುಪಿಎ ಸರ್ಕಾರ ಅವಧಿಯ ಪೆಟ್ರೋಲ್ ಬೆಲೆ 50 ರೂಪಿ ಇತ್ತು ಇಂದು ನೂರರ ಗಡಿದಾಟ್ಟಿದೆ. ಹೀಗೆ ಅಗತ್ಯ ವಸ್ತುಗಳ ಬೆಲೆ ಕೂಡಾ ಗಗನಕ್ಕೆ ಏರಿದೆ ಎಂದು ಕೀಡಿಕಾರಿದ ಅವರು. ನಮ್ಮ ಯುವ ನಾಯಕ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

Comments (0)

Your email address will not be published. Required fields are marked *

Back to top button