ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಎನ್ ಚಂದ್ರಪ್ಪ ಘೋಷಣೆಯಾಗಿದ್ದು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿ ಎನ್ ಚಂದ್ರಪ್ಪ ಭೇಟಿ ನೀಡಿದ್ದಾರೆ. ಕಚೇರಿ ಮುಂದೆ ಬೃಹತ್ ಹಾರ ಹಾಕಿ ಎತ್ತಿ ಕುಣಿದಾಡಿ ಕಾರ್ಯಕರ್ತರು ಚಂದ್ರಪ್ಪನವರನ್ನು ಬರಮಾಡಿಕೊಂಡರು. ಇದೇ ಸಮಯದಲ್ಲಿ ಮಾತನಾಡಿದ ಚಂದ್ರಪ್ಪ, ಐದು ವರ್ಷಗಳು ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಪರಾಭವ ಕಾಣಬೇಕಾಯ್ತು ಕಾಂಗ್ರೆಸ್ ನವರು ಪ್ರಚಾರ ಪ್ರಿಯರಲ್ಲ ಕೆಲಸ ಮಾಡಿ ತೋರಿಸುತ್ತಾರೆ ಎಂದು ಹೇಳಿದರು.
ಪರಾಭವದ ನಂತರವೂ ಕೂಡ ನಿರಂತರ ಕಾರ್ಯ ಚಟುವಟಿಕೆಗಳಲ್ಲಿಪಾಲ್ಗೊಂಡಿದ್ದೇನೆ ಮನೆ ಮಗನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು. ಜಿಲ್ಲೆಯ ಎಲ್ಲಾ ಮಾಜಿ ಹಾಲಿ ಸಚಿವರು ಮತ್ತು ಶಾಸಕರು ಹಾಗೂ ಕಾರ್ಯಕರ್ತರ ಶಿಫಾರಸ್ಸಿನ ಮೇರೆಗೆ ಎಐಸಿಸಿ ಟಿಕೆಟ್ ನೀಡಿದೆ. ಎಲ್ಲವನ್ನೂ ಅಳೆದು ತೂಗಿದ ಮೇಲೆ ಪಕ್ಷ ಟಿಕೆಟ್ ನೀಡಿದೆ. ಅಭ್ಯರ್ಥಿಯ ಪ್ರಚಾರಕರಾಗಿ ಸಿದ್ದರಾಮಯ್ಯ ಬರುತ್ತಾರೆ ಅವರೇ ಸ್ಟಾರ್ ಪ್ರಚಾರಕರು. ಬಿಜೆಪಿಯವರ ಬಗ್ಗೆ ಟೀಕೆ ಮಾಡಲು ಹೋಗಲ್ಲ ಆ ಸಮಯವನ್ನು ಪಕ್ಷದ ಸಂಘಟನೆಗೆ ಬಳಸುತ್ತೇನೆ ಎಂದರು.
ಎಲ್ಲಾ ಆಕಾಂಕ್ಷಿಗಳನ್ನು ನಾನು ಮಾತನಾಡಿಸುತ್ತೇನೆ. ನಾವೆಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ಬೇಸರವಾಗುವುದು ಬೇಡ ಜಿಲ್ಲೆಯಲ್ಲಿ ನನಗೊಬ್ಬನಿಗೆ ಟಿಕೆಟ್ ಸಿಕ್ಕಿಲ್ಲ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಟಿಕೆಟ್ ಸಿಕ್ಕಿದೆ. ನಾನು ಜಾತಿಗಾಗಿ ರಾಜಕಾರಣ ಮಾಡುವನಲ್ಲ ಜಾತಿ ಮುಂದಿಟ್ಟುಕೊಂಡು ರಾಜಕೀಯ ಮಾಡಿಲ್ಲ.
ತೀರಾ ವಿಕೋಪಕ್ಕೆ ಹೋದಾಗ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಹತ್ತು ವರ್ಷಗಳಕಾಲ ನಾನು ತೆಜೋವಧೆಗೆ ಒಳಗಾಗಿದ್ದೇನೆ. ಜಾತಿ ಹೆಸರು ಬದಲಾಯಿಸಿ ನಕಲಿ ದಾಖಲೆ ಸೃಷ್ಠಿಸಿದ ಇಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ದೂರು ಕೊಟ್ಟಿದ್ದೇನೆ ನನ್ನ ರಕ್ಷಣೆಗಾಗಿ ನಾನು ದೂರು ಕೊಟ್ಟಿದ್ದೇನೆ. ಹತ್ತು ವರ್ಷಗಳ ಕಾಲ ನಾನು ನೊಂದಿದ್ದೇನೆ ಜಿಲ್ಲೆಯ ಅಭಿವೃದ್ದಿಗಾಗಿ ಜಾತ್ಯಾತೀತೆಗಾಗಿ ಸಂವಿಧಾನ ಉಳಿವಿಗಾಗಿ ಜನತೆ ಮತ ಹಾಕಬೇಕಿದೆ ಎಂದು ಹೇಳಿದರು.
ಕೇಂದ್ರೀಯ ವಿದ್ಯಾಲಯ ಕೇವಲ ಒಂದು ತಿಂಗಳು ಕಳೆದಿದ್ದರೆ ಮಂಜೂರಾಗುತ್ತಿತ್ತು. ನಾನು ಸಂಪೂರ್ಣವಾಗಿ ಫಾಲೋಅಪ್ ಮಾಡುತ್ತಿದೆ. ನಾನು ಹಿಂದಿನ ಸಚಿವರನ್ನು ಟೀಕೆ ಮಾಡಲು ಹೋಗುವುದಿಲ್ಲ ನನ್ನ ಕೆಲಸ ಮಾತ್ರ ಮಾಡುತ್ತೇನೆ. ಭದ್ರಾ ಯೋಜನೆಗಾಗಿ ಸಾಕಷ್ಟು ಓಡಾಡಿದ್ದೇನೆ, ಆದರೆ ಒಂದು ಸೇತುವೆ ಮಾಡಿ ಸಚಿವರು ಭರ್ಜರಿ ಪ್ರಚಾರ ತೆಗೆದುಕೊಂಡರು. ಕಾಂಗ್ರೆಸ್ ನವರು ಪ್ರಚಾರ ಪ್ರಿಯರಲ್ಲ ಕೆಲಸ ಮಾಡಿ ತೋರಿಸುತ್ತಾರೆ ಎಂದರು.