ಚಿಕ್ಕಮಗಳೂರು : ರಸ್ತೆಯೂ ಇಲ್ಲ, ವಾಸಿಸಲು ಹಕ್ಕುಪತ್ರವೂ ಇಲ್ಲ. ಎನ್ ಆರ್ ಪುರ ತಾಲೂಕಿನ ಜಕ್ಕಣ್ಣಕ್ಕಿ ಗ್ರಾಮಸ್ಥರಿಂದ ಸರ್ಕಾರದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆಂದು ತಿಳಿದು ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯನ್ನು ಸಹ ಗ್ರಾಮಸ್ಥರು ಬಹಿಷ್ಕರಿಸಿದ್ದರು. ಆ ವೇಳೆ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಭರವಸೆಯನ್ನ ನೀಡಿದ್ದರು. ಕೊಟ್ಟ ಭರವಸೆ ಹುಸಿಯಾದ ಹಿನ್ನೆಲೆ ಮತ್ತೆ ಲೋಕ ಚುನಾವಣೆಯನ್ನ ಗ್ರಾಮಸ್ಥರು ಬಹಿಷ್ಕರಿದ್ದಾರೆ.
2015 ರಲ್ಲಿ ರಸ್ತೆಗೆ ಜಲ್ಲಿ ಹಾಕಿ ರಸ್ತೆ ಮಾಡದೆ ನಿರ್ಲಕ್ಷಿಸಿದ್ದಾರೆ. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ನಮ್ಮ ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಇಲ್ಲದಂತಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ದೂರನ್ನ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಬನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.