ಬೆಂಗಳೂರು: ಡಾ. ಪುತಿನ ಕಾವ್ಯ ನಾಟಕ ಪ್ರಬಂಧ ಪುರಸ್ಕಾರವನ್ನು ಹಿರಿಯ ರಂಗಕರ್ಮಿ, ನಾಟಕಕಾರ ಮತ್ತು ರಂಗ ನಿರ್ದೇಶಕ ಶಶಿಧರ ಭಾರಿಘಾಟ್ ಅವರಿಗೆ ಪ್ರದಾನ ಮಾಡಲಾಯಿತು.
ಸಹಗಮನ, ಸಾಯುವನೇ ಚಿರಂಜೀವಿ ಕೃತಿಗೆ ಈ ಬಾರಿಯ ಪ್ರಶಸ್ತಿ ಸಿಕ್ಕಿದೆ. ಪುತಿನ ಪುರಸ್ಕಾರವು₹ 25,ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದ್ದು ಡಾ. ಪುತಿನ ಟ್ರಸ್ಟ್ ಅಧ್ಯಕ್ಷ ಡಾ. ಎಚ್. ಎಸ್ ವೆಂಕಟೇಶ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕೇಂದ್ರ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪಿ. ರಮಾ ಪುತಿನ ಅವರ ಕೃತಿಗಳ ಗಾಯನ ನಡೆಸಿದರು. ರಂಜನಿ ಕೀರ್ತಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ರಂಗಕರ್ಮಿ ಶಶಿಧರಗೆ ಪುತಿನ ಕಾವ್ಯ, ನಾಟಕ, ಪ್ರಬಂಧ ಪುರಸ್ಕಾರ
RELATED ARTICLES