Freedom TV

ಜೈಲು ಪಾಲಾದ ಸೋನು…!

ಬೆಂಗಳೂರು : ಸೋನು ಶ್ರೀನಿವಾಸ್ ಗೌಡ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​ ನಾಲ್ಕು ದಿನ ಪೊಲೀಸ್​ ಕಸ್ಟಡಿಗೆ ನೀಡಿತ್ತು. ಸೋನು ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಿದ್ದು, ಇಂದು ಮತ್ತೆ ಸೋನುಳನ್ನ ಕೋರ್ಟ್​ಗೆ ಪೊಲೀಸರು ಹಾಜರುಪಡಿಸಿದ್ದರು.

ಬಾಲಕಿ ದತ್ತು ಪಡೆದುಕೊಂಡಿದ್ದೇನೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಬಿಲ್ಡಪ್ ಕೊಟ್ಟಿದ್ದ ರೀಲ್ಸ್ ರಾಣಿ ನಿಮಯ ಪಾಲಿಸದೇ ದತ್ತು ಪಡೆದಿರುವ ಬಗ್ಗೆ ದೂರು ದಾಖಲಾಗಿತ್ತು. ಬ್ಯಾಡರಹಳ್ಳಿ ಪೊಲೀಸರು ಸೋನುಳನ್ನ ಬಂಧಿಸಿದ್ರು ರಾಯಾಚೂರಿನ ಕಾಚಪುರದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿ ಇಂದು ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಆರೋಪಿಯನ್ನು ಕೋರ್ಟ್​ಗೆ ಹಾಜರುಪಡಿಸಿದ್ದರು.

ಆದರೆ ಈಗ ನ್ಯಾಯಾಲಯವು ಸೋನು ಶ್ರೀನಿವಾಸ್ ಗೌಡಗೆ 14 ದಿನಗಳ CJM ನ್ಯಾಯಾಲಯವು ಏಪ್ರಿಲ್​ 8 ರವರೆಗೆ ಸೋನು ಶ್ರೀನಿವಾಸ್​ ಗೌಡಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಸೋನುಗೌಡರನ್ನು ಕರೆದೊಯ್ದಿದ್ದಾರೆ.

Comments (0)

Your email address will not be published. Required fields are marked *

Back to top button