ಬೆಂಗಳೂರು : ಪೋಷಕರು ತಮ್ಮ ಮಗುವನ್ನು ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್ ಅಲ್ಲಿ ಓಡಾಡ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೋಷಕರ ಬೇಜವಬ್ದಾರಿತನಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಾವು ಎಷ್ಟು ಜಾಗೃತೆ ವಹಿಸಿದರೂ ಕಡಿಮೆಯೇ. ಹೌದು ರಸ್ತೆಯಲ್ಲಿ ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಟ್ರಾಫಿಕ್ ರೂಲ್ಸ್ಗಳನ್ನು ಪಾಲಿಸಿ ನಿಧಾನಕ್ಕೆ ವಾಹನ ಚಲಾಯಿಸಬೇಕು. ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರು ತುಸು ಹೆಚ್ಚು ಜಾಗೃತೆ ವಹಿಸಬೇಕು.
ಇನ್ನೂ ದ್ವಿಚಕ್ರ ವಾಹನದಲ್ಲಿ ಪುಟ್ಟ ಮಕ್ಕಳಿದ್ದರಂತೂ ಅವರನ್ನೂ ಜೋಪಾನವಾಗಿ ಗಾಡಿಯಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸಬೇಕಾಗುತ್ತದೆ. ಅದರೆ ಇಲ್ಲೊಂದು ಪೋಷಕರು ಮಾತ್ರ ತಮ್ಮ ಮಗುವನ್ನು ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್ ಅಲ್ಲಿ ಓಡಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೋಷಕರ ಬೇಜವಬ್ದಾರಿತನಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ತಮ್ಮ ಮಗನನ್ನು ದ್ವಿಚಕ್ರ ವಾಹನದ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ದಂಪತಿಗಳಿಬ್ಬರು ರಾತ್ರಿ ಹೊತ್ತಿನಲ್ಲಿ ವೈಟ್ ಫೀಲ್ಡ್ ರಸ್ತೆಯಲ್ಲಿ ಸ್ಕೂಟರ್ ಸವಾರಿ ಹೊರಟಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.
ಏಪ್ರಿಲ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳದೆ ಮಗುವನ್ನು ಈ ರೀತಿ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಓಡಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.