Top Newsಸುದ್ದಿ

ಸೂರತ್​ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದು ಉದ್ಘಾಟನೆಗೊಂಡ ಮರುದಿನವೇ ಬಾಗಿಲು ಮುಚ್ಚಿದೆ

ಸೂರತ್​ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದು ಉದ್ಘಾಟನೆಗೊಂಡ ಮರುದಿನವೇ ಬಾಗಿಲು ಮುಚ್ಚಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಪದವಿ ಇಲ್ಲದ ಐವರು ಜನಸೇವೆಯ ಹೆಸರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆದಿದ್ದರು. ಆಸ್ಪತ್ರೆ ಉದ್ಘಾಟನೆಗೆ ಮುದ್ರಿತವಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಸೂರತ್ ಪೊಲೀಸ್ ಉನ್ನತಾಧಿಕಾರಿಗಳು, ಪೊಲೀಸ್ ಕಮಿಷನರ್ ಮತ್ತು ಕಾರ್ಪೊರೇಷನ್ ಕಮಿಷನರ್ ಅವರ ಹೆಸರನ್ನೂ ಕೇಳದೆ ಮುದ್ರಿಸಲಾಗಿತ್ತು.

ಆಸ್ಪತ್ರೆಯ ಉದ್ಘಾಟನೆಗೆ ಯಾವುದೇ ಅಧಿಕಾರಿಗಳು ಹಾಜರಾಗದಿದ್ದರೂ, ಆಸ್ಪತ್ರೆಯ ಉದ್ಘಾಟನೆಯ ಮರುದಿನವೇ ಗುಜರಾತ್ ನ ಆರೋಗ್ಯ ಇಲಾಖೆ ಕ್ರಮ ಕೈಗೊಂಡು ಆಸ್ಪತ್ರೆಗೆ ಸೀಲ್ ಮಾಡಿದೆ. ನಕಲಿ ಪದವಿಗಳ ಹೆಸರಿನಲ್ಲಿ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ವಂಚಕರನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.ಐವರು ಆರೋಪಿಗಳ ಪೈಕಿ ಇಬ್ಬರ ನಕಲಿ ಪದವಿ ಬಹಿರಂಗಗೊಂಡ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಉಳಿದ ಆರೋಪಿಗಳ ಪದವಿಯನ್ನು ತನಿಖೆ ನಡೆಸುತ್ತಿದ್ದಾರೆ. ಸೂರತ್‌ನ ಪಾಂಡೆಸರಾ ಪ್ರದೇಶದಲ್ಲಿ ಜನಸೇವಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ವೈದ್ಯರ ಹೆಸರನ್ನು ಬರೆಯಲಾಗಿದ್ದು, ಅದರಲ್ಲಿ ಒಬ್ಬ ವೈದ್ಯನ ಹೆಸರು ಬಬ್ಲು ರಾಮ್ ಆದರೆ ಶುಕ್ಲಾ ಎಂದು ತನ್ನನ್ನು ತಾನು ವೈದ್ಯ ಎಂದು ಕರೆದುಕೊಂಡಿದ್ದಾನೆ.

Comments (0)

Your email address will not be published. Required fields are marked *

Back to top button