ಬೆಂಗಳೂರು : NIA ನೂತನ DG ಯಾಗಿ ಸದಾನಂದ್ ವಸಂತ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರು ಮಹಾರಾಷ್ಟ್ರ ಕೇಡರ್‌ನ 1990 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಸೇವೆಯಿಂದ ನಿವೃತ್ತರಾದ ದಿನಕರ್ ಗುಪ್ತಾ ಅವರಿಂದ ಅಧಿಕಾರ ಹಂಸ್ತಾತರವಾಗಿದೆ.
2008 ರ ಮುಂಬೈ ಹೋಟೆಲ್ ಮೇಲೆ ದಾಳಿ ವೇಳೆ ಸದಾನಂದ ವಸಂತ್ ಮಹಾರಾಷ್ಟ್ರ ATS ಮುಖ್ಯಸ್ಥರಾಗಿದ್ದರು. ಮುಂಬೈ ದಾಳಿಕೋರರನ್ನ ಹಿಡಿಯುವಲ್ಲಿ ಸದಾನಂದ ವಸಂತ್ ಪ್ರಮುಖ ಪಾತ್ರ ವಹಿಸಿದ್ದರು. 2008 ರಲ್ಲಿ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೂ ಸಹ ಇವರು ಭಾಜನರಾಗಿದ್ದರು.