ಬೆಂಗಳೂರು : ಅಂಬಾನಿ ಕುಟುಂಬದ ಪ್ರತಿಯೊಬ್ಬರ ಬಗ್ಗೆಯೂ ತಿಳಿದುಕೊಂಡಷ್ಟು ಮತ್ತಷ್ಟು ತಿಳಿಯುವ ಕುತೂಹಲವಂತೂ ಇದ್ದೇ ಇದೆ. ಅದರಲ್ಲೂ ನೀತಾ ಅಂಬಾನಿ ಅವರ ಸ್ಟೈಲಿಶ್ ಲುಕ್ ಎಲ್ಲರನ್ನೂ ಮೋಡಿ ಮಾಡುತ್ತದೆ. ಅವರ ಚಪ್ಪಲಿಯಿಂದ ಹಿಡಿದು ಹಣೆಯ ಬಿಂದಿಯವರೆಗೆ ಅವರ ಕುರಿತು ಒಂದಲ್ಲ ಒಂದು ವಿಷಯಗಳು ಸದಾ ಚರ್ಚೆಯಲ್ಲಿರುತ್ತದೆ.
ತನ್ನದೇ ಆದ ಶೈಲಿ ಮತ್ತು ಸೊಬಗಿಗೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಈಗ ಮತ್ತೆ ಚರ್ಚೆಯಲ್ಲಿರುವುದು ಅವರ ವಿಶಿಷ್ಟವಾದ ಬಾಟಲಿಯ ನೀರಿನಿಂದ. ನೀರಲ್ಲಿ ಅಂತಹ ವಿಶೇಷತೆ ಏನಿದೆ ಎಂಬ ಪ್ರಶ್ನೆ ಕಾಡಬಹುದು. ಆದರೆ ಇದು ಅಂತಿಂತ ನೀರಲ್ಲ ವಿಶ್ವದ ಅತ್ಯಂತ ದುಬಾರಿ ನೀರು. ಜನಪ್ರಿಯ ಡಿಸೈನರ್ ಫರ್ನಾಂಡೋ ಅಲ್ಟಾಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ ನೀತಾ ಅಂಬಾನಿ ನೀರು ಕುಡಿಯುತ್ತಾರೆ. ಇದು ವಿಶ್ವದ ಅತ್ಯಂತ ದುಬಾರಿ ನೀರು. ಏಕೆಂದರೆ ಈ ಚಿನ್ನದ ಬಾಟಲಿಯ ಬೆಲೆಯೇ 49 ಲಕ್ಷ ರೂಪಾಯಿಯಂತೆ!
ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಬ್ರಾಂಡ್ ನ 49 ಲಕ್ಷ ರೂಪಾಯಿಗಳ ಈ ನೀರನ್ನು ನೀತಾ ಅಂಬಾನಿ ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ನೀರು ಎನ್ನಲಾಗುತ್ತದೆ. ಚಿನ್ನದಂತಹ ನೀರಿನ ಬಾಟಲಿಯನ್ನು ಹಿಡಿದಿರುವ ಮಾರ್ಫ್ ಮಾಡಿದ ಚಿತ್ರವನ್ನು ಆಧರಿಸಿ ಈ ಸುದ್ದಿಯನ್ನು ಆಂಗ್ಲ ಮಾಧ್ಯಮವೊಂದು ಪ್ರಕಟಿಸಿದೆ. 2015ರ ಐಪಿಎಲ್ ಪಂದ್ಯದ ಸಮಯದಲ್ಲಿ ಮೂಲ ಫೋಟೋದಲ್ಲಿ ನೀತಾ ಅಂಬಾನಿ ಸಾಮಾನ್ಯ ನೀರಿನ ಬಾಟಲಿಯನ್ನು ಹಿಡಿದುಕೊಂಡಿದ್ದಾರೆ. ಅದೇ ಚಿತ್ರವನ್ನು ಚಿನ್ನದ ಬಾಟಲಿಗೆ ರೂಪಾಂತರಿಸಿ ಪ್ರಕಟಿಸಲಾಗಿದೆ. ಈ ಬ್ರಾಂಡ್ ನ ನೀರು ವಿಶ್ವದಲ್ಲೇ ಅತ್ಯಂತ ದುಬಾರಿ ಎನ್ನುವುದು ನಿಜ. ಆದರೆ ನೀತಾ ಅಂಬಾನಿ ಎಷ್ಟು ಪ್ರಮಾಣದಲ್ಲಿ ಅದನ್ನು ಕುಡಿಯುತ್ತಾರೆ ಎನ್ನುವುದು ಖಚಿತವಾಗಿಲ್ಲ.
ತ್ವಚೆಯನ್ನು ಯೌವನವಾಗಿಡಲು ಚಿನ್ನದ ಕಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಯುವ ಮತ್ತು ಕ್ರಿಯಾತ್ಮಕವಾಗಿ ಕಾಣಲು ನೀತಾ ಅಂಬಾನಿ ಈ ಚಿನ್ನದ ನೀರನ್ನು ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಚಿನ್ನದ ನೀರಿನ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಹಲವು ಪ್ರಮುಖ ವಿಷಯಗಳಿವೆ. ಈ ನೀರಿನ ಬಾಟಲಿಯು 24 ಕ್ಯಾರಟ್ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಫಿಜಿ ಮತ್ತು ಫ್ರಾನ್ಸ್‌ನ ನೈಸರ್ಗಿಕ ಬುಗ್ಗೆಯಿಂದ ನೀರನ್ನು ಸಂಗ್ರಹಿಸಲಾಗುತ್ತದೆ. ಐಸ್‌ಲ್ಯಾಂಡ್‌ನ ಹಿಮನದಿ ನೀರು 23 ಕ್ಯಾರಟ್ ಚಿನ್ನದ ಧೂಳನ್ನು ಹೊಂದಿರುತ್ತದೆ.
ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಅತ್ಯಂತ ದುಬಾರಿ ಕಸ್ಟಮೈಸ್ ಮಾಡಿದ ಮೊಬೈಲ್ ಫೋನ್ ಗಳನ್ನು ಬಳಸುತ್ತಾರೆ. ಇತ್ತೀಚೆಗೆ, ಅವರು ಮಹತ್ವದ ಕಾರ್ಯಕ್ರಮವೊಂದರಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಹೊತ್ತೊಯ್ದಿದ್ದಾರೆ. ನೀತಾ ಅಂಬಾನಿ ಅವರು ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ ಅನ್ನು ಬಳಸುತ್ತಾರೆ, ಇದು ವಿಶ್ವದ ಅತ್ಯಂತ ದುಬಾರಿ ಫೋನ್‌ಗಳಲ್ಲಿ ಒಂದಾಗಿದೆ. ಈ ಕಸ್ಟಮ್ ವಿನ್ಯಾಸದ ಫೋನ್ ಹಿಂಭಾಗದಲ್ಲಿ ದೊಡ್ಡ ಗುಲಾಬಿ ವಜ್ರವನ್ನು ಹೊಂದಿದೆ ಮತ್ತು ಪ್ಲಾಟಿನಂನಲ್ಲಿ ಸುತ್ತುವರಿಯಲ್ಪಟ್ಟಿದೆ. ಇದರ ಬೆಲೆ ಸುಮಾರು 300 ಕೋಟಿ ರೂ. ಎನ್ನಲಾಗುತ್ತದೆ.