Freedom TV

ಪೊಲೀಸ್​​ ಠಾಣೆಯಲ್ಲಿ ಮಿಸ್ ಫೈಯರ್!

ಬೆಂಗಳೂರು : ಬೆಂಗಳೂರು ನಗರ ವ್ಯಾಪ್ತಿಯ ಬೇಗೂರು ಠಾಣೆಯಲ್ಲಿ ಎಸ್ ಬಿ ಕಾನ್ಸ್‌ಟೇಬಲ್ ವೆಂಕಣ್ಣ ಎಂಬುವರಿಂದ ಪಿಸ್ತೂಲ್ ನಿಂದ ಮಿಸ್ ಫೈಯರ್ ಆಗಿವಂತಹ ಘಟನೆ ನಡೆದಿದೆ. ಮಿಸ್ ಫೈಯರ್ ವೇಳೆ ರೈಟರ್ ಅಂಬುದಾಸ್ ಎಡಗಾಲಿಗೆ ಗುಂಡು ತಗುಲಿದೆ.

ಗಾಯಾಳುವನ್ನು ನಗರದ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಸಿಬ್ಬಂದಿ ಬಂದೂಕುಗಳ ಜಮೆ ಮಾಡಿಕೊಳ್ಳುತ್ತಿದ್ದರು. ಮುಕುಂದರೆಡ್ಡಿ ಎನ್ನುವವರು ಬುಲೆಟ್ ಮ್ಯಾಗಜಿನ್ ಕಳಚಿ ಪಿಸ್ತೂಲ್ ಜಮೆ ಮಾಡಿದ್ದರು. ಆದರೂ ಪಿಸ್ತೂಲ್ ಪರಿಶೀಲನೆ ವೇಳೆ ಮಿಸ್ ಫೈಯರ್ ಆಗಿದೆ.

ಮ್ಯಾಗಜಿನ್ ನಲ್ಲಿದ್ದ ಒಂದು ಬುಲೆಟ್ ಪಿಸ್ತೂಲ್ ನಲ್ಲಿ ಲಾಕ್ ಆಗಿರುವ ಸಾಧ್ಯತೆಯಿಂದಾಗಿ ಪರಿಶೀಲನೆ ವೇಳೆ ಟ್ರಿಗರ್ ಒತ್ತಿದಾಗ ಮಿಸ್ ಫೈಯರ್​ ಆಗಿರುವಂತಹ ಘಟನೆ ನಡೆದಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆಯನ್ನ ನಡೆಸುತ್ತಿದೆ.

Comments (0)

Your email address will not be published. Required fields are marked *

Back to top button