ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದದ್ಯಾಂತ ಭದ್ರತೆ ಮಾಡಿಕೊಳ್ಳಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಈ ಬಗ್ಗ ಪ್ರತಿಕ್ರಿಯಿಸಿದ್ದು, ರಾಜ್ಯಾದ್ಯಂತ ಹಾಗೂ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳ ಹಾಕಲಾಗಿದೆ.
ಸೆಂಟ್ರಲ್ ನಿಂದ ಹದಿನೈದು ಟೀಂಗಳು ಬಂದಿವೆ. ಚುನಾವಣೆ ಹಿನ್ನಲೆ ಸಾಕಷ್ಟು ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಇನ್ನೂ ಎಲ್ಲಾ ಕಡೆ ರೌಡಿಗಳ ಮನೆ ಮೇಲೆ ರೇಡ್ ಆಗಿದೆ. ಕೆಲ ರೌಡಿಗಳನ್ನ ಸಿಆರ್ ಪಿಸಿ 110 ಅಡಿ ಹೇಳಿಕೆ ದಾಖಲು ಮಾಡಿಕೊಂಡು ವಾರ್ನಿಂಗ್ ಕೊಡಲಾಗಿದೆ.
ರೌಡಿಗಳ ಮನೆ ಮೇಲೆ ನಾಮಕಾವಸ್ತೆಗೆ ದಾಳಿ ನಡೆಸಿಲ್ಲ. ರೌಡಿಗಳು ರಾಜಕಾರಣಿಗಳ ಜೊತೆಗಿರಲಿ ಏನೇ ಇರಲಿ ಕಾನೂನು ಪ್ರಕಾರ ಎಲ್ರೂ ಒಂದೇ ಎಂದು ಡಿಜಿಪಿ ಅಲೋಕ್ ಮೋಹನ್ ಪ್ರತಿಕ್ರಿಯಿಸಿದ್ದಾರೆ.