ಬೆಂಗಳೂರು : ಮೇಕೆದಾಟು ಕುಡಿಯೋ ನೀರಿನ ಯೋಜನೆ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮೇಕೆದಾಟು ಯೋಜನೆಯಿಂದ ಸುಮಾರು 30.65 ಟಿಎಂಸಿ ಅಂದಾಜು ನೀರು ಸಂಗ್ರಹ ಆಗಲಿದೆ. ಆದರೆ ತಮಿಳುನಾಡು ಸರ್ಕಾರ ಇದನ್ನ ಅನವಶ್ಯಕವಾಗಿ ವಿರೋಧ ಮಾಡ್ತಾ ಇದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ಕೂಡ ವಿನಾಕಾರಣ ವಿರೋಧ ಮಾಡ್ತಾ ಇದೆ. ಇದನ್ನ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದೇನೆ ಎಂದು ಹೇಳಿದರು.
ಕರ್ನಾಟಕದಲ್ಲಿ ಅದ್ರಲ್ಲೂ ಕಾವೇರಿಗೆ ಸಂಬಂಧ ಪಟ್ಟಂತೆ ಸುಮಾರು 9 ಜಿಲ್ಲೆಗಳು, 27 ತಾಲೂಕು ಹಾಗೂ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಭೀಕರವಾಗಿದೆ. ಕಳೆದ 5 ತಿಂಗಳಿಂದ ಬೆಂಗಳೂರಿನ ನಾಗರಿಕರು ನೀರಿಲ್ಲದೆ ಪರದಾಡುತ್ತಿದ್ದಾರೆ ಕೆಲವರು ವಾಸ ಇದ್ದ ಮನೆಗಳನ್ನ ಬಿಟ್ಟು ಅವರವರ ಊರಿಗೆ ವಲಸೆ ಹೋಗಿದ್ದಾರೆ ಎಂದರು.