ಕ್ರೈಂ ಸ್ಟೋರಿಸುದ್ದಿ

ವಾಕಿಂಗ್ ಹೋದ ವೃದ್ಧನ ಮೇಲೆ ಸಾಕು ನಾಯಿ ದಾಳಿ!

ಬೆಂಗಳೂರು : ಅವರು ಹಿರಿಯ ನಾಗರೀಕ..ವಯಸ್ಸು 86 ದಾಟಿದೆ…ಹೆಸರು ಧರಣೇಂದ್ರ ನಾಯಕ್.. ಜಯನಗರದ 4ನೇ ಟಿ ಬ್ಲಾಕ್ ಶಾಲಿನಿ ಗ್ರೌಂಡ್ ಪಕ್ಕದ ನಿವಾಸಿ..ಎಂದಿನಂತೆ ಇಂದು ಕೂಡ ಕೇರ್ ಟೇಕರ್ ಒಬ್ಬರ ಜೊತೆ ಇಂದು ಬೆಳ್ಳಿಗ್ಗೆ ವಾಕಿಂಗ್ ಹೋಗಿದ್ರು.. ಆದ್ರೆ, ಇವತ್ತು ಅವರ ಟೈಂ ಸರಿ ಇರಲಿಲ್ಲ.. ಹೀಗಾಗಿ ಪಾರ್ಕ್ ಪಕ್ಕದ ಫುಟ್ ಪಾತ್ ಮೇಲೆ ನಿಂತಿದ್ದ ಸಾಕು ನಾಯಿಯೊಂದು ಅಟ್ಯಾಕ್ ಮಾಡಿಬಿಟ್ಟಿದೆ.

 

ನಾಯಿಯ ಕಡಿತಕ್ಕೆ ಅವರ ಬಲಗೈ ಮಾಂಸವೇ ಕಿತ್ತು ಬಂದಿದೆ.. ನಾಯಿ ತೀವ್ರ ದಾಳಿ ಮಾಡಿದ ಕಾರಣ ಸ್ಥಳದಲ್ಲಿ ಬಿದ್ದವರ ತಲೆಗೆ ಪೆಟ್ಟು ಬಿದ್ದಿದೆ.. ಅದ್ಯಾವಾಗ ನಾಯಿ ಅಟ್ಯಾಕ್ ಮಾಡಿತೋ ಆಗಲೇ ನಾಯಿ ಮತ್ತು ನಾಯಿ ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾರೆ. ಇತ್ತ ಗಾಯಾಳು ಧರಣೇಂದ್ರ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ದುರಂತ ಏನಪ್ಪ ಅಂದ್ರೆ, ಬೆಂಗಳೂರಿನಲ್ಲಿ ನಾಯಿ ಸಾಕೋದಿಕ್ಕೆ ಅನುಮತಿ ಇರಬೇಕು..ಅದ್ರಲ್ಲೂ ಕ್ರೂರ ನಾಯಿಗಳನ್ನ ಸಾಕೋದಿಕ್ಕೆ ನಿಷೇಧವಿದೆ. ಇನ್ನು ಆ ನಾಯಿ ಯಾವುದು ಅದರ ಮಾಲೀಕ ಯಾರು ಅನ್ನೋದರ ಕುರಿತಾಗಿ ಯಾವುದೇ ಮಾಹಿತಿ ಇಲ್ಲ.. ತಕ್ಷಣ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು, ಈ ರೀತಿ ನಾಯಿಗಳನ್ನ ಪಾರ್ಕ್ ಗೆ ಕರೆದು ತರುವವರ ಬಗ್ಗೆ ಹಾಗೂ ಡೇಂಜರೆಸ್ ನಾಯಿಗಳನ್ನ ಸಾಕುವುದರ ಕುರಿತು ಕ್ರಮ ಜರುಗಿಸಬೇಕಿದೆ.

Comments (0)

Your email address will not be published. Required fields are marked *

Back to top button