ಬಳ್ಳಾರಿ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಅವರ ಅಫಿಡೇವಿಟ್ ಸಮರ್ಪಕವಾಗಿಲ್ಲದ ಕಾರಣ ನಾಮಪತ್ರ ರದ್ದುಗೊಳಿಸಲು ಶ್ರೀರಾಮುಲು ಪರ ವಕೀಲರು ಒತ್ತಾಯಿಸಿದ್ದಾರೆ.
ಚುನಾವಣಾಧಿಕಾರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿರುವ ಅವರು, ಕಾಂಗ್ರೆಸ್ ಅಭ್ಯರ್ಥಿ ನಾಮ ಪತ್ರವನ್ನು ರದ್ದುಗೊಳಿಸಬೇಕು ಎಂದಿದ್ದಾರೆ. ಘೋಷಣೆ ಪತ್ರದಲ್ಲಿ ನ್ಯೂನತೆಗಳಿದ್ದು, ಈ ಪತ್ರದಲ್ಲಿ ನೋಟರಿ ಮುಂದೆ ಸಹಿ ಮಾಡಿರುವುದಿಲ್ಲ. ಹೀಗಾಗಿ ಈ ಘೋಷಣೆ ಪತ್ರ ಕಾನೂನಾತ್ಮಕವಾಗಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ತಂದೆ ಓಬಣ್ಣ ಮತ್ತು ಅವಲಂಬಿತರು ಎಂದು ನಮೂದು ಮಾಡಿ, ಅವರ ಸಾಲ ಚಿರಾಸ್ಥಿ ಮಾಹಿತಿ ನೀಡಿರುವುದಿಲ್ಲ. ಹೀಗಾಗಿ ಘೋಷಣೆ ಪತ್ರದಲ್ಲಿ ಕಾನೂನಾತ್ಮಕತೆ ಇಲ್ಲ. ಹೀಗಾಗಿ ಕಾಂಗ್ರೆಸ್ ನಾಮಪತ್ರ ರಿಜೆಕ್ಟ್ ಮಾಡಬಹುದಾಗಿದೆ.
ಇದಲ್ಲದೇ ಐಟಿ ರಿಟರ್ನ್ ವಿವರ ಸಹ ಇಲ್ಲ. ಐಟಿ ಘೋಷಣೆ ಕಾಲಂ ಖಾಲಿ ಇದೆ. ಇದಕ್ಕೆ ಸಮಪರ್ಕ ಉತ್ತರ ನೀಡಿರುವದಿಲ್ಲ. ಈ ರೀತಿಯಲ್ಲಿ ಚುನಾವಣೆ ಅಧಿಕಾರಿಗೆ ಶ್ರೀರಾಮುಲು ಪರ ವಕೀಲರು ಪ್ರಶ್ನಿಸಿದ್ದಾರೆ.