ಬಳ್ಳಾರಿ : ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ರು ಸಹೋದರ ಸೋಮಶೇಖರ್ ರೆಡ್ಡಿ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಪಕ್ಷ ವಿಲೀನ ಮಾಡಿದ್ದಾಯ್ತು. ರಾಜ್ಯಮಟ್ಟದಲ್ಲಿ ಒಂದಾದ್ರೂ ಕುಟುಂಬದಲ್ಲಿ ರೆಡ್ಡಿ ಸಹೋದರರು ಒಂದಾಗಲಿಲ್ಲ ಎಂಬುದೇ ಚರ್ಚೆಗೆ ಕಾರಣವಾಗಿದೆ.
ನಾಯಕರು ಒಂದಾಗಬೇಕೆಂದು ಕೆಆರ್ಪಿಪಿ ಬಿಜೆಪಿ ಜಂಟಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಗೈರಾಗೋ ಮೂಲಕ ಸೋಮಶೇಖರ್ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯಿಂದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮಶೇಖರ್ ರೆಡ್ಡಿ ಸ್ಪರ್ಧೆ ಮಾಡಿದ್ರು, ಕೆಆರ್ಪಿಪಿ ಪಕ್ಷದಿಂದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡಿದ್ರು ಆದರೆ ಇಬ್ಬರ ಜಗಳದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿದಿತ್ತು.
ತಮ್ಮ ಸೋಲಿಗೆ ಜನಾರ್ದನ ರೆಡ್ಡಿ ಕಾರಣ ಎನ್ನುವುದು ಸೋಮಶೇಖರ್ ರೆಡ್ಡಿ ವಾದವಾಗಿದೆ. ಬಿಜೆಪಿ ಪಕ್ಷಕ್ಕೆ ಜನಾರ್ದನ ರೆಡ್ಡಿ ಸೇರಿದ್ರು, ಅರುಣಾ ಲಕ್ಷ್ಮಿ ಅವರು ಬಳ್ಳಾರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ರು ಆದರೆ ಸೋಮಶೇಖರ್ ರೆಡ್ಡಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.
ರೆಡ್ಡಿ ಸಹೋದರರ ಕುಟುಂಬ ಮನೆಯೊಂದು ಮೂರು ಬಾಗಿಲಾಗಿರೋ ಸೂಚನೆ ಕಾಣ್ತಾಯಿದೆ. ರೆಡ್ಡಿ ಸಹೋದರರ ಪರಸ್ಪರ ಮುನಿಸು ಶ್ರೀರಾಮುಲು ಇಕ್ಕಟ್ಟಿನಲ್ಲಿ ಸಿಲುಕಿಸುವಂತೆ ಮಾಡಿದೆ.