ಸುದ್ದಿ
ಆಕ್ರಮವಾಗಿ ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳು ಸೀಜ್!

ಬಳ್ಳಾರಿ : ಆಕ್ರಮವಾಗಿ ಸಂಗ್ರಹಿಸಿದ್ದ ಕುಕ್ಕರ್ ಹಾಗೂ ಗೃಹ ಬಳಕೆ ವಸ್ತುಗಳು ಸುಮಾರು 5.50 ಲಕ್ಷ ಮೌಲ್ಯದ ಕುಕ್ಕರ್, ಪ್ಯಾನ್, ಗ್ಯಾಸ್ ಸ್ಟೋಗಳು ಬ್ರೂಸ್ ಪೇಟ್ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿವೆ. ಆಕ್ರಮವಾಗಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳನ್ನು ಸೀಜ್ ಮಾಡಲಾಗಿದೆ.

ಬಳ್ಳಾರಿ ನಗರದ ವಡ್ಡರ ಬಂಡೆಯಲ್ಲಿ ಘಟನೆ ನಡೆದಿದ್ದು,ಅಕ್ರಮವಾಗಿ ಸಂಗ್ರಹ ಮಾಡಿದ್ದ 300 ಕುಕ್ಕರ್, 150 ಗ್ಯಾಸ್ ಒಲೆ , 66 ಸೀಲಿಂಗ್ ಪ್ಯಾನ್ ಹಾಗೂ ಒಂದು ಟಾಟಾ ಏಸ್ ವಾಹನ ಜಪ್ತಿ ಮಾಡಲಾಗಿದೆ. ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.




