
ಬಾಗಲಕೋಟೆ : ಲೋಕಸಭಾ ಟಿಕೆಟ್ ತಪ್ಪಿದ ಹಿನ್ನೆಲೆ, ವೀಣಾ ಕಾಶಪ್ಪನವರ ಅಭಿಮಾನಿಗಳ, ಹಿತೈಷಿಗಳ ಸಭೆ ಬಾಗಲಕೋಟೆಯ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಸಭೆಯ ವೇದಿಕೆಗೆ ಬರುತ್ತಿದ್ದಂತೆ, ಕಾರ್ಯಕರ್ತರನ್ನ ತಬ್ಬಿಕೊಂಡು ವೀಣಾ ಕಾಶಪ್ಪನವರು ಕಣ್ಣೇರಿಟ್ಟಿದ್ದಾರೆ.

ವೀಣಾ ಕಾಶಪ್ಪನವರ ಪತಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಸಭೆಯಲ್ಲಿ ನೂರಾರು ಅಭಿಮಾನಿಗಳು, ಹಿತೈಷಿಗಳು ಭಾಗಿಯಾಗಿದ್ದರು. ಸಭೆಯ ಬಳಿಕ ಸ್ಪರ್ಧೆ ನಿರ್ಣಯ ಕೈಗೊಳ್ಳಲಿದ್ದಾರೆಂಬುದು ತಿಳಿದು ಬಂದಿದೆ.




