ಬಾಗಲಕೋಟೆ : ಬಾಗಲಕೋಟೆಯಲ್ಲಿ ಟಿಕೇಟ್ ಹಂಚಿಕೆ ಬಿಕ್ಕಟ್ಟು ಇನ್ನು ಮುಂದುವರೆಯುತ್ತಿದೆ. ಕಾಂಗ್ರೆಸ್ ಟಿಕೇಟ್ ಕೈ ತಪ್ಪಿದಕ್ಕೆ ವೀಣಾ ಕಾಶಪ್ಪನವರ ಸಿಟ್ಟು ಇನ್ನು ಶಮನವಾಗಿಲ್ಲ.
ಆರಂಭದಲ್ಲಿ ವೀಣಾ ಕಾಶಪ್ಪನವರ ಬಂಡಾಯದ ಸುಳಿವು ನೀಡಿದ್ದರು. ಆದರೆ ಈಗ ಬಂಡಾಯ ಸ್ಪರ್ಧೆ ಮಾಡ್ತೀನಿ ಅಂತಾನು ಹೇಳುತ್ತಿಲ್ಲ. ಸಂಯುಕ್ತ ಪಾಟಿಲ್ ಪರ ಪ್ರಚಾರಕ್ಕೆ ಹೋಗುತ್ತೀನಿ ಅಂತಾನೂ ಹೇಳುತ್ತಿಲ್ಲ. ವೀಣಾ ಕಾಶಪ್ಪನವರು ಚಕ್ರವ್ಯೂಹದಲ್ಲಿ ಸಿಲುಕಿದ್ರಾ ಎಂಬುದೇ ಪ್ರಶ್ನೆಯಾಗಿದೆ.
ವೀಣಾ ಟಿಕೆಟ್ ಕೈ ತಪ್ಪಿದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮೌನವಾದ್ರಾ.? ನಾಮಪತ್ರ ಸಲ್ಲಿಕೆ ದಿನ ಸಮೀಪಿಸುತ್ತಾ ಬಂದರೂ, ಕಾಂಗ್ರೆಸ್ ಕಾರ್ಯಕರ್ತರಕಲ್ಲಿ ಉತ್ಸಾಹ ಇಲ್ಲ. ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಪ್ರಚಾರವನ್ನ ಆರಂಭಿಸಿದ್ದಾರೆ. ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ ಕೂಡ ತಮ್ಮ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ ಎಂದರು.
ವೀಣಾರನ್ನ ಸಮಾಧಾನಪಡಿಸಿ ಪ್ರಚಾರಕ್ಕೆ ಕರೀತಾರ ಸಂಯುಕ್ತ ಪಾಟೀಲ್? ಇಲ್ಲಾ ಚುನಾವಣೆ ಕಣದಿಂದ ದೂರ ಉಳಿದುಕೊಂಡು ವೀಣಾ ಒಳಏಟು ನೀಡುತ್ತಾರಾ? ಹೀಗೆ ಬಾಗಲಕೋಟೆಯ ಕೈ ಕಾರ್ಯಕರ್ತರಿಗೆ ಹಲವು ಪ್ರಶ್ನೆಗಳು ಕಾಡತೊಡಗಿದೆ.