ಬಾಗಲಕೋಟೆ : ರಾಜಕೀಯದಲ್ಲಿ ಲೋಕಸಭಾ ಚುನಾವಣಾ ಅಲೆ ಇದೀಗಲೇ ಸದ್ದು ಮಾಡ್ತಾ ಇದೆ. ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿಯೂ ಭರ್ಜರಿ ರೋಡ್ ಶೋ ಪ್ರಚಾರಗಳು ನಡಿತಾ ಇದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹನುಗುಂದ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಂತಹ ಎಸ್.ಆರ್. ನವಲಿಹಿರೇಮಠ,ಈ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂಬುದು ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಜನಾರ್ಧನ್ ರೆಡ್ಡಿ ಸಂಸ್ಥಾಪನೆಯ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಅಭ್ಯರ್ಥಿಯಾಗಿ ಹುನಗುಂದ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ನಿಂದ ವಿಜಯಾನಂದ ಕಾಶಪ್ಪನವರ, ಬಿಜೆಪಿಯ ದೊಡ್ಡನಗೌಡ ಪಾಟೀಲ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಎಸ್ ಆರ್ ನವಲಿಹಿರೇಮಠ 33,790 ಮತಗಳನ್ನ ಪಡೆದು ಪರಾಭವಗೊಂಡಿದ್ದರು.

ಕಳೆದ ಎರಡು ಮೂರು ದಿನಗಳ ಹಿಂದೆ ಜನಾರ್ದನ್ ರೆಡ್ಡಿ ಅವರು ತಮ್ಮ ಕಲ್ಯಾಣ ರಾಜ್ಯ ಪ್ರಗತಿಪಕ್ಷವನ್ನ ಬಿಜೆಪಿ ಜೊತೆಗೆ ವಿಲೀನಗೊಳಿಸಿದ್ದಾರೆ, ತಮ್ಮ ಮುಂದಿನ ನಡೆಯ ಕುರಿತು ಬಾಗಲಕೋಟೆ ಜಿಲ್ಲೆಯ ಇಳಕಲ ನಗರದ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಸ್.ಆರ್. ನವಲಿಹಿರೇಮಠ ಅವರು ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಯಾರನ್ನು ಬೆಂಬಲಿಸಬೇಕು ಎಂದು ಸ್ಪರ್ಧಾರ್ಥಿಗಳು ಕೇಳುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರು ನಮ್ಮನ್ನು ಸಂಪರ್ಕಿಸಿದ್ದಾರೆ, ಸಚಿವ ಶಿವಾನಂದ ಪಾಟೀಲರು ಸಂಪರ್ಕ ಮಾಡಿ ಮಾತನಾಡಿದ್ದಾರೆ. ಸ್ಥಳೀಯ ನಾಯಕರು ಗೊಂದಲ ಇರುವುದರಿಂದ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಬ್ಬರು ಆತ್ಮೀಯರೇ, ಆತ್ಮೀಯತೆನೇ ಬೇರೆ ರಾಜಕೀಯನೇ ಬೇರೆ. ಯಾರಿಗೂ ಏನು ಹೇಳಿಲ್ಲ, ಇದೇ ವಾರದಲ್ಲಿ ನಮ್ಮ ಬೆಂಬಲ ಯಾರಿಗೆ ಎಂದು ಹೇಳುತ್ತೇವೆ ಎಂದರು.

By admin

Leave a Reply

Your email address will not be published. Required fields are marked *

Verified by MonsterInsights