ಚಿತ್ರದುರ್ಗ : ಗಂಡನ ಮನೆಯವರು, ಮನೆಯಿಂದ ಆಚೆ ಹಾಕಿದ್ದಕ್ಕೆ ಪತಿ ಮನೆಯ ಹೊಸ್ತಿಲ ಮುಂದೆ ಕುಳಿತು ಪತ್ನಿ ಧರಣಿಯನ್ನ ನಡೆಸಿದ್ದಾರೆ. ಗಂಡನ ಮನೆಯವರು ಮನೆಯೊಳಗೆ ಬಿಟ್ಟುಕೊಳ್ತಿಲ್ಲಾ ಅಂತ ಆಕ್ರೋಶವನ್ನು ಹೊರಹಾಕಿದ್ದಾರೆ. ನನಗೆ ಗಂಡ ಬೇಕು ಅಂತಾ ಪತಿಯ ಮನೆಯ ಮುಂದೆ ಪತ್ನಿಯ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಈ ಘಟನೆ ಚಿತ್ರದುರ್ಗದ ಆದರ್ಶ ನಗರದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ತೇಜಸ್ವಿನಿ, ವಿಕಾಸ ದಂಪತಿ, ಚಿತ್ರದುರ್ಗ ಮೂಲದ ವಿಕಾಸ, ದಾವಣಗೆರೆ ಜಿಲ್ಲೆ, ಮಲೇಬೆನ್ನೂರು ಮೂಲದ ತೇಜಸ್ವಿನಿ. ತೇಜಸ್ವಿನಿಗೆ ಮಕ್ಕಳಾಗದಂತೆ ಮಾತ್ರೆ ಕೊಡಿಸಿದ್ರು ಪತಿಯ ಮನೆಯವರು ನನ್ನ ಹೊಟ್ಟೆಯಲ್ಲಿರುವ ಮಗು ಹೆಣ್ಣೋ ಗಂಡೋ ತಿಳಿಯೋಕೆ ಸಾಗರದ ಜ್ಯೋತಿಷಿ ಬಳಿ ಕರೆದೊಯ್ದಿದ್ರು, ಹಿಂದೆ ಕೈ ಕಟ್ಟಿಸಿ ಮಾತ್ರೆ ನುಂಗುವಂತೆ ನನಗೆ ಒತ್ತಾಯ ಮಾಡಿದ್ರು, ವರದಕ್ಷಿಣೆ ತರುವಂತೆ ತನಗೆ ಕಿರುಕುಳ ಕೊಡ್ತಿದ್ರು, ಈಗ ಬಾಗಿಲು ತೆಗೆಯದೇ ನನ್ನನ್ನು ಹೊರಗೆ ಹಾಕಿದ್ದಾರೆ ಅಂತ ಪತಿ ವಿಕಾಸ ಹಾಗೂ ಅತ್ತೆ ಮಾವನ ವಿರುದ್ಧ ತೇಜಸ್ವಿನಿ ಗಂಭೀರ ಆರೋಪ ಮಾಡಿದ್ದಾರೆ.


