Thursday, September 11, 2025
27.5 C
Bengaluru
Google search engine
LIVE
ಮನೆರಾಜಕೀಯಯಾರು ಗೊತ್ತಾ ಬೆಂಗಳೂರು ಉತ್ತರ ಕೈ ಅಭ್ಯರ್ಥಿ?

ಯಾರು ಗೊತ್ತಾ ಬೆಂಗಳೂರು ಉತ್ತರ ಕೈ ಅಭ್ಯರ್ಥಿ?

ರಾಜ್ಯದಲ್ಲಿ ಲೋಕ ಸಮರಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಅಭ್ಯರ್ಥಿ ಯಾಗಿರುವುದರಿಂದ ಎದುರಾಳಿ ಯಾರು ಎಂಬ ಪ್ರಶ್ನೆ ಇನ್ನೂ ಕುತೂಹಲಕರವಾಗಿ ಉಳಿದಿದೆ. ಬಿಜೆಪಿಯ ಪ್ರಬಲ ಕೋಟೆ ಛಿದ್ರ ಮಾಡಲು ಯಂಗ್ ಲೀಡರ್ ಎಂಟ್ರಿ ಕೊಡೋ ಸಾಧ್ಯತೆ ಇದೆ. ಇದರಿಂದ ವಲಸೆ ಬಂದಿರುವ ಈ ನಾಯಕಿಗೀಗ ಟೆನ್ಸ್ನ್ ಶುರುವಾಗಿದೆ.

ಕೇಂದ್ರ ಮಂತ್ರಿಗೆ ಸೋಲಿನ ರುಚಿ ತೋರಿಸಲು ಕೈ ಪಡೆ ಚಕ್ರವ್ಯೂಹ ರಚಿಸುತ್ತಿದೆ . ಶೋಭಾರನ್ನ ಮಣಿಸಲು ಕೈ ಪಾಳಯ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತಿದೆ . ಬಿಜೆಪಿಯ ಪ್ರಬಲ ಕೋಟೆ ಛಿದ್ರ ಮಾಡಲು ಯಂಗ್ ಲೀಡರ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಚರ್ಚೆ ಕೇಳಿ ಬರುತ್ತಿದೆ. ಕಾಂಗ್ರೆಸ್ ಶಾಸಕ ಪ್ರಿಯಾ ಕೃಷ್ಣರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಒಕ್ಕಲಿಗರ ಪಾರುಪತ್ಯವಿರುವ ಈ ಕ್ಷೇತ್ರದಲ್ಲಿ ಈ ಬಾರಿ ಹೊಸ ಪ್ರಯೋಗ ಮಾಡಲು ಕೈ ಪಡೆ ಮುಂದಾಗಿದೆ.

ಪ್ರಿಯಾಕೃಷ್ಣ ಸ್ಪರ್ಧಿಸಿದರೆ ಭಾರೀ ಅನುಕೂಲವಾಗಲಿದೆ. ಅಲ್ಲದೇ ಕಾಂಗ್ರೆಸ್ಗೂ ಶಕ್ತಿ ಸಿಗಲಿದೆ. ಅಪ್ಪ ಮಾಜಿ ಮಂತ್ರಿ ಕೃಷ್ಣಪ್ಪರ ಬೆಂಬಲ ಹಾಗೂ ಕೃಷ್ಣ ಭೈರೇಗೌಡರ ಸಹಕಾರದೊಂದಿಗೆ ಕೃಷ್ಣಗೆ ಗೆಲುವು ಸರಳವಾಗಲಿದೆ. ಇದಲ್ಲದೇ ಈಗಾಗಲೇ ಶುರುವಾಗಿರುವ ಗೋ ಬ್ಯಾಕ್ ಅಭಿಯಾನದಿಂದ ಶೋಭಾ ಕರಂದ್ಲಾಜೆಗೆ ಒಂದಷ್ಟು ಅಡ್ಡಿಯಾಗುವ ಸಾಧ್ಯತೆ ಇದೆ. ಅಲ್ಲದೇ ಇದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಆಗಲಿದೆ.

ಶೋಭಾ ವಿರೋಧಿ ಬಣ ಆ್ಯಕ್ಟಿವ್ ಆದ್ರೆ ಕಾಂಗ್ರೆಸ್ಗೆ ವರದಾನವಾಗಲಿದೆ. ಪದೇ ಪದೇ ಕ್ಷೇತ್ರ ಬದಲಾವಣೆಯಿಂದ ಶೋಭಾಗೆ ಹಿನ್ನೆಡೆಯಾಗಬಹುದು. ಬೆಂಗಳೂರಿನ ಲೀಡರ್ ಎಂಬ ಕಾರಣಕ್ಕೆ ಜನ ಕೃಷ್ಣ ಮತ ಹಾಕುವ ನಿರೀಕ್ಷೆ ಇದೆ ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರದ ಇಮೇಜ್ನಿಂದ ಪ್ರಿಯಾಕೃಷ್ಣಗೆ ಲಾಭವಾಗಬಹುದಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments