ರಾಜಕೀಯರಾಜ್ಯಸುದ್ದಿ

ಮಾಜಿ ಸಿಎಂ ಬಿಎಸ್​​ವೈ ಕಟ್ಟ ಬೆಂಬಲಿಗ ಮತ್ತು ಬಿ.ವೈ ವಿಜಯೇಂದ್ರ ಆಪ್ತನಿಗೆ ಒಲಿದ ಜಿಲ್ಲಾಧ್ಯಕ್ಷ ಪಟ್ಟ

ಯಾದಗಿರಿ : ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಯಾದಗಿರಿ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಅವರಿಗೆ ಜಿಲ್ಲಾಧ್ಯಕ್ಷ ಪಟ್ಟ ಒಲಿದಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮೊದಲಬಾರಿಗೆ ಅಮೀನ್ ರೆಡ್ಡಿ ಪಾಟೀಲ್ ಆಯ್ಕೆಯಾಗಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಹಾಪುರ ಮತಕ್ಷೇತ್ರದಿಂದ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರಗೆ ಭಾರಿ ಪೈಪೋಟಿ ನೀಡಿದ್ದರು. ಜಿಲ್ಲೆಯಲ್ಲಿ ಯುವ ನಾಯಕನಿಗೆ ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಅಮೀನ್ ರೆಡ್ಡಿ ಯಾಳಗಿ ಅವರನ್ನು ಸಂಘಟನಾ ಚತುರ ಹಾಗೂ ಬಿಎಸ್ ವೈ ಕಟ್ಟ ಬೆಂಬಲಿಗ ಮತ್ತು ಬಿ.ವೈ ವಿಜಯೇಂದ್ರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದಕ್ಕಾಗಿ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ ದೋರೆತಿದ್ದು ಯಾದಗಿರಿ ಜಿಲ್ಲೆಯ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ.

Comments (0)

Your email address will not be published. Required fields are marked *

Back to top button