ವಿಜಯಪುರ : ನನ್ನನ್ನು ಲಿಂಗಾಯತ ವಿರೋಧಿ ಎನ್ನುವವರ ನಾಲಿಗೆ ಕತ್ತರಿಸಬೇಕು ಎಂದು ವಿಜಯಪುರದಲ್ಲಿ ಕಾರ್ಯಕ್ರಮ ಉದ್ಘಾಟನೆ ವೇಳೆ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದ ರೈಲ್ವೇ ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಪ್ರಾಡಕ್ಟ್ ಕಾರ್ಯಕ್ರಮದ ಉದ್ಘಾಟನೆಯ ವೇದಿಕೆ ಭಾಷಣದಲ್ಲಿ ಮಾತನಾಡಿದ ಅವರು, ನಾನು ಮೂವತ್ತು ವರ್ಷದ ರಾಜಕಾರಣದಲ್ಲಿ ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಜನರು ನಮ್ಮವರು ಎಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಕೆಲವರು ಮಾಧ್ಯಮಗಳ ಮೂಲಕ ನಾನು ಲಿಂಗಾಯತ ವಿರೋಧಿ ಅನ್ನಿಸುತ್ತಿದ್ದಾರೆ ನನ್ನನ್ನು ಲಿಂಗಾಯತ ವಿರೋಧಿ ಎಂದವರ ನಾಲಿಗೆ ಕತ್ತರಿಸಬೇಕು. ದೇವರೇ ಅವರ ನಾಲಿಗೆಯನ್ನ ಕಟ್ ಮಾಡು ಎಂದು ಸಂಸದ ಜಿಗಜಿಣಗಿ ಭಾಷಣದಲ್ಲಿ ತಮ್ಮ ಆಕ್ರೋಷವನ್ನು ಹೊರಹಾಕಿದರು.
ವಿಜಯಪುರದಲ್ಲಿ ನಡೆದಂತಹ ಒಂದು ನಿಲ್ದಾಣ ಒಂದು ಪ್ರಾಡಕ್ಟ್ ಕಾರ್ಯಕ್ರಮ ಉದ್ಘಾಟನೆ ವೇಳೆ ಭಾಷಣ ಮಾಡುತ್ತಿರುವಂತಹ ಸಂದರ್ಭದಲ್ಲಿ ನನ್ನನ್ನು ಲಿಂಗಾಯತ ವಿರೋಧಿ ಎಂದಿದ್ದಾರೆ. ನನ್ನ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಜಾತಿಯ ಆಧಾರದ ಮೇಲೆ ಜನರನ್ನ ಪರಿಗಣಿಸಿಲ್ಲ ಎಲ್ಲರೂ ನಮ್ಮವರೇ ಎಂಬ ಭಾವನೆಯೊಂದಿಗೆ ರಾಜಕಾರಣ ಮಾಡಿದ್ದೇನೆ. ಹಗಲು ರಾತ್ರಿಯೆನ್ನದೆ ನಾನು ಜನರಿಗಾಗಿ ಶ್ರಮಿಸಿದ್ದೇನೆ ಎಂದು ಹೇಳಿದರು.
ಕೆಲವರು ಮಾಧ್ಯಮಗಳ ಮೂಲಕ ನಾನು ಲಿಂಗಾಯತ ವಿರೋಧಿ ಅನ್ನಿಸುತ್ತಿದ್ದಾರೆ. ಟಿವಿಯ ಒಬ್ಬ ವ್ಯಕ್ತಿ ಲಿಂಗಾಯತ ವಿರೋಧಿ ಎಂದು ಭಾಷೆ ಬಳಸಿದ್ದಾರೆ. ನಾನು ದಲಿತರನ್ನ ಕಟ್ಟಿಕೊಂಡು ರಾಜಕೀಯ ಮಾಡಿದ್ದರೆ ಇಷ್ಟು ಮುಂದಕ್ಕೆ ಬರೋಕೆ ಆಗ್ತಾಯಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.